ಜಿಬಿಎ
ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ಐದು ನಗರ ಪಾಲಿಕೆಗಳು ಮೊದಲ ಬಜೆಟ್ ಮಂಡಿಸಲು ಸಿದ್ಧತೆ ಆರಂಭಿಸಿವೆ.
ಐದು ನಗರ ಪಾಲಿಕೆಗಳಲ್ಲಿ ಬೆಂಗಳೂರು ಕೇಂದ್ರ ನಗರ ಪಾಲಿಕೆ ಬಜೆಟ್ ತಯಾರಿಸಲು ಮೊದಲ ಹೆಜ್ಜೆ ಇರಿಸಿದ್ದು, ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿದೆ.
2026–27ನೇ ಸಾಲಿನ ಬಜೆಟ್‌ಗೆ ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ನಾಗರಿಕರು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ಸಂಘ ಸಂಸ್ಥೆಗಳು ಜನವರಿ 27ರೊಳಗೆ ಸಲಹೆಗಳನ್ನು ನೀಡಬಹುದು. ಮೂಲಸೌಕರ್ಯ, ಸಾರ್ವಜನಿಕ ಆರೋಗ್ಯ, ಸುರಕ್ಷತೆ, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಕಲ್ಯಾಣಕ್ಕೆ ಆದ್ಯತೆ ನೀಡಿ, ಸಮಗ್ರ ಹಾಗೂ ಸುಸ್ಥಿರ ನಗರ ಅಭಿವೃದ್ಧಿಗೆ ಪೂರಕವಾದ ಬಜೆಟ್ ಸಿದ್ಧಪಡಿಸಲು ಅನುವಾಗುವಂತೆ ಸಲಹೆಗಳನ್ನು ನೀಡಬಹುದು ಎಂದು ಕೇಂದ್ರ ನಗರ ಪಾಲಿಕೆ ಅಭಿವೃದ್ಧಿ ಹೆಚ್ಚುವರಿ ಆಯುಕ್ತ ದಲ್ಜಿತ್ ಕುಮಾರ್ ತಿಳಿಸಿದರು.
ಉಪ ನಿಯಂತ್ರಕರು (ಹಣಕಾಸು), 16ನೇ ಮಹಡಿ, ಪಿಯುಬಿ ಕಟ್ಟಡ, ಎಂ.ಜಿ. ರಸ್ತೆ, ಈ ಕಚೇರಿಯ ಮುಖ್ಯದ್ವಾರದ ಬಳಿ ಇರಿಸಿರುವ ಸಲಹೆ ಪೆಟ್ಟಿಗೆಗೆ ಬಜೆಟ್‌ನ ಸಲಹೆಗಳನ್ನು ಹಾಕಬಹುದು. dcfbccc@gmail.com ಗೆ ಇ-ಮೇಲ್ ಕೂಡ ಕಳುಹಿಸಬಹುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.