
ಬೆಂಗಳೂರು: ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವ ವಿದ್ಯಾಲಯದ ಸ್ನಾತಕೋತ್ತರ ವಿಭಾಗ
ಮತ್ತು ಸಂಯೋಜಿತ ಸಂಶೋಧನಾ ಕೇಂದ್ರಗಳಿಗೆ ಸಂಶೋಧನಾ ವಿದ್ಯಾರ್ಥಿಗಳಿಂದ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಸ್ನಾತಕೋತರ ಪದವೀಧರರು ಆನ್‍ಲೈನ್ ಅಥವಾ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಪ್ರವೇಶ ಪರೀಕ್ಷೆಯ ವಿವರ, ಪ್ರವೇಶ ಪರೀಕ್ಷೆಯಿಂದ ವಿನಾಯಿತಿ ಹೊಂದುವ ವಿವರ, ಅರ್ಜಿ ಸಲ್ಲಿಸುವ ವಿಧಾನ, ಶುಲ್ಕ, ವಿಷಯವಾರು ಖಾಲಿ ಸ್ಥಾನಗಳು, ಸಂಶೋಧನ ಕೇಂದ್ರಗಳ ವಿವರಗಳನ್ನು ಜಾಲತಾಣ https;//bcu.ac..in/onlineapp/ ನಲ್ಲಿ ಪ್ರಕಟಿಸಲಾಗಿದೆ.
ಮಾರ್ಚ್ 18ರವರೆಗೆ ದಂಡ ಇಲ್ಲದೇ ಶುಲ್ಕ, ಮಾ.25ರವರೆಗೆ ₹200 ದಂಡ ಸಹಿತ ಶುಲ್ಕ ಪಾವತಿಸಬಹುದು. ಪರೀಕ್ಷೆ ದಿನಾಂಕ www.bcu.ac.in ನಲ್ಲಿ
ಪ್ರಕಟಿಸಲಾಗುವುದು. ಅರ್ಜಿಗಳನ್ನು ಕುಲಸಚಿವರ (ಮೌಲ್ಯಮಾಪನ) ಕಚೇರಿ, ಜ್ಞಾನ ಜ್ಯೋತಿ ಸೆಂಟ್ರಲ್ ಕಾಲೇಜು ಆವರಣ, ಡಾ. ಅಂಬೇಡ್ಕರ್ ವೀದಿ, ಬೆಂಗಳೂರು– 560001 ಇಲ್ಲಿಗೆ ತಲುಪಿಸಲು ಕೋರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.