ADVERTISEMENT

ಜನ ದನಿ | ‘ರಂಗಮಂದಿರ: ಕಸ ತೆರವುಗೊಳಿಸಿ’

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 22:13 IST
Last Updated 15 ಫೆಬ್ರುವರಿ 2026, 22:13 IST
   

‘ರಂಗಮಂದಿರ: ಕಸ ತೆರವುಗೊಳಿಸಿ’

ಮಲ್ಲೇಶಪಾಳ್ಯದ ಡಾ. ರಾಜ್‌ಕುಮಾರ್‌ ಬಯಲು ರಂಗಮಂದಿರದಲ್ಲಿ ಕಸ ತಂದು ಹಾಕಲಾಗುತ್ತಿದೆ. ಇದರಿಂದ ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿದೆ. ವಾಯು ವಿಹಾರಕ್ಕೆ ಬರುವವರು, ಆಟ ಆಡಲು ಬರುವ ಮಕ್ಕಳು ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. ಇಲ್ಲಿರುವ ಆಟಿಕೆಗಳು ಹಾಳಾಗಿ ಹೋಗಿದ್ದು, ಕೂಡಲೇ ಸರಿಪಡಿಸಬೇಕು. ಸಂಬಂಧಪಟ್ಟ ಪಾಲಿಕೆ ಸಿಬ್ಬಂದಿ ಈ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು. 

-ವೀರೇಶ್, ಮಲ್ಲೇಶಪಾಳ್ಯ

ADVERTISEMENT

‘ಪಾದಚಾರಿ ಮಾರ್ಗದಲ್ಲಿನ ಕಸ ತೆರವುಗೊಳಿಸಿ’

ಅಮರಜ್ಯೋತಿ ನಗರ ಆರನೇ ಅಡ್ಡರಸ್ತೆಯ ರಾಘವೇಂದ್ರ ಸ್ವಾಮಿ ಮಠದ ಮುಂಭಾಗದ ಪಾದಚಾರಿ ಮಾರ್ಗದಲ್ಲಿ ಕಸದ ರಾಶಿ ಹಾಕಲಾಗಿದೆ. ಇದರಿಂದ ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿದ್ದು, ಸೊಳ್ಳೆಗಳ ಉತ್ಪತ್ತಿಯ ತಾಣವಾಗಿದೆ. ಪಾದಚಾರಿ ಮಾರ್ಗದಲ್ಲಿ ಕಸ ಹಾಕಿರುವ ಕಾರಣ ಸಾರ್ವಜನಿಕರು ರಸ್ತೆಯ ಮೂಲಕ ಹಾದು ಹೋಗಬೇಕಾಗಿದೆ. ಇಲ್ಲಿ ಹಾಕಿರುವ ಕಸದ ರಾಶಿಯನ್ನು ಪಾಲಿಕೆ ಸಿಬ್ಬಂದಿ ಕೂಡಲೇ ವಿಲೇವಾರಿ ಮಾಡಬೇಕು.

ಶಿವಲಿಂಗಯ್ಯ ಬಿ., ಅಮರಜ್ಯೋತಿ ನಗರ

‘ಅನಾಥ ವಾಹನಗಳ ವಿಲೇವಾರಿ ಮಾಡಿ’

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಮುಂಭಾಗದಲ್ಲಿ ಇರುವ ವಾಹನ ನಿಲುಗಡೆ ಜಾಗದಲ್ಲಿ ಅನಾಥ ವಾಹನಗಳನ್ನು ನಿಲುಗಡೆ ಮಾಡಲಾಗಿದೆ. ಅಲ್ಲದೆ, ಆ ಜಾಗದಲ್ಲಿ ಕಸದ ರಾಶಿಯೂ ಬಿದ್ದಿದೆ. ಕೆಲವರು ಇದರ ಆಸರೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದ ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ. ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳು ಈ ಅನಾಥ ವಾಹನಗಳನ್ನು ವಿಲೇವಾರಿ ಮಾಡಿ ನಗರದ ಸೌಂದರ್ಯ ಕಾಪಾಡಬೇಕು.

ಕೆ. ನಾಗಲಿಂಗಪ್ಪ, ಗಾಂಧಿನಗರ

ತೆರೆದ ಸ್ಥಿತಿಯಲ್ಲಿ ಮ್ಯಾನ್‌ಹೋಲ್‌’

ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಧನ್ವಂತರಿ ರಸ್ತೆಯಲ್ಲಿ ತೆರೆದ ಸ್ಥಿತಿಯಲ್ಲಿರುವ ಮ್ಯಾನ್‌ಹೋಲ್‌ನಿಂದ ವಾಹನ ಸಂಚಾರಕ್ಕೆ ಅನನುಕೂಲವಾಗಿದೆ. ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಮ್ಯಾನ್‌ಹೋಲ್‌ ತೆರೆದ ಸ್ಥಿತಿಯಲ್ಲಿ ಇರುವುದರಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಇದನ್ನು ಮುಚ್ಚುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

ಶಿವಪ್ರಸಾದ್ ಎಸ್., ಗಾಂಧಿನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.