ADVERTISEMENT

ದತ್ತು ಪಡೆದ ನಾಯಿಗೆ ಚಿತ್ರ ಹಿಂಸೆ ನೀಡಿ ಸಾಯಿಸಿದ ದಂಪತಿ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 13:31 IST
Last Updated 27 ಅಕ್ಟೋಬರ್ 2025, 13:31 IST
<div class="paragraphs"><p>ಸಾಂದರ್ಭಿಕ ಚಿತ್ರ ( ಎಐ )</p></div>

ಸಾಂದರ್ಭಿಕ ಚಿತ್ರ ( ಎಐ )

   

ಬೆಂಗಳೂರು: ದತ್ತು ಪಡೆದ ನಾಯಿಗೆ ಚಿತ್ರ ಹಿಂಸೆ ನೀಡಿ ಸಾಯಿಸಿದ ಆರೋಪಕ್ಕೆ ಸಂಬಂಧಿಸಿದಂತೆ ದಂಪತಿ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಮಾಜಿಕ ಕಾರ್ಯಕರ್ತ ಎ.ಎಸ್.ಶರತ್‌ ಲಾಲ್ ಅವರ ದೂರಿನ ಮೇರೆಗೆ ಅನುಭವ ಕಬರ ಮತ್ತು ಅವರ ಪತ್ನಿ ಕೃತಿ ಲಬ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ADVERTISEMENT

2021ರಲ್ಲಿ ಸ್ವರ್ಣಿಮಾ ನಿಶಾಂತ್ ಅವರಿಂದ ಅನುಭವ ಮತ್ತು ಕೃತಿ ಅವರು ಬೊಂಗೊ ಹೆಸರಿನ ನಾಯಿಯನ್ನು ದತ್ತು ಪಡೆದು, ಅದರ ಪಾಲನೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. ಅಕ್ಟೋಬರ್ 23ರಂದು ಸ್ವರ್ಣಿಮಾ ಅವರು ಅನುಭವ ಅವರಿಗೆ ಕರೆ ಮಾಡಿ ನಾಯಿ ಬಗ್ಗೆ ವಿಚಾರಿಸಿದಾಗ, ಅದನ್ನು ಬೀದಿಗೆ ಬಿಟ್ಟು, ಹಿಂಸೆ ನೀಡಿ ಸಾಯಿಸಿರುವ ವಿಚಾರ ಗೊತ್ತಾಗಿದೆ ಎಂದು ಶರತ್ ದೂರಿನಲ್ಲಿ ತಿಳಿಸಿದ್ದಾರೆ.‌

ನಾಯಿಗೆ ಹಿಂಸೆ ನೀಡಿದ್ದಲ್ಲದೇ, ಅದನ್ನು ಬಿಸಾಡಿದ ಜಾಗದಲ್ಲಿನ ಜನರಿಗೂ ತೊಂದರೆ ಉಂಟು ಮಾಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಶರತ್ ದೂರಿನ ಮೇರೆಗೆ ವಿಚಾರಣೆಗೆ ಬರುವಂತೆ ದಂಪತಿಗೆ ನೋಟಿಸ್ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.