ADVERTISEMENT

ಪೊಲೀಸರ ಸೋಗಿನಲ್ಲಿ ಅಪಹರಣ: ಐವರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 20:00 IST
Last Updated 17 ಸೆಪ್ಟೆಂಬರ್ 2022, 20:00 IST

ಬೆಂಗಳೂರು: ಹೈದರಾಬಾದ್ ಪೊಲೀ ಸರ ಸೋಗಿನಲ್ಲಿ ವ್ಯಕ್ತಿಯೊಬ್ಬರನ್ನು ಅಪಹರಣ ಮಾಡಿ ಹಣ ದೋಚಿದ್ದ ಆರೋಪದಡಿ ಐವರು ಆರೋಪಿಗಳನ್ನು ಬ್ಯಾಟರಾಯನಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ನಗರದ ನಿವಾಸಿ ವಸಂತ್ ಎಂಬು ವವರನ್ನು ಇತ್ತೀಚೆಗೆ ಅಪಹರಣ ಮಾಡಲಾಗಿತ್ತು. ಈ ಸಂಬಂಧ ಆರೋಪಿಗಳಾದ ಪ್ರಸಾದ್, ಸಿದ್ದಾರ್ಥ್, ನಾಗು, ಕಿರಣ ಹಾಗೂ ಬಾನು ಎಂಬು ವವರನ್ನು ಹೈದರಾಬಾದ್‌ನಲ್ಲಿ ವಶಕ್ಕೆ ಪಡೆಯಲಾಗಿದೆ. ಇವರ ಬಳಿ ನಗದು ಹಾಗೂ ಪೊಲೀಸರ ಹೆಸರಿನ ನಕಲಿ ಗುರುತಿನ ಚೀಟಿಗಳು ಸಿಕ್ಕಿವೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಜಮೀನು ಮಾರಾಟದ ಹೆಸರಿನಲ್ಲಿ ವಸಂತ್ ಅವರನ್ನು ಸಂಪರ್ಕಿಸಿದ್ದ ಆರೋಪಿಗಳು, ಮಾತುಕತೆಗಾಗಿ ದೇವನಹಳ್ಳಿ ಬಳಿ ಕರೆಸಿದ್ದರು. ನಂತರ, ಪೊಲೀಸರ ಸೋಗಿನಲ್ಲಿ ಅಪಹರಿಸಿಕೊಂಡು ಹೈದರಾಬಾದ್‌ಗೆ ಕರೆದೊಯ್ದಿದ್ದರು. ಕೊಲೆ ಬೆದರಿಕೆ ಯೊಡ್ಡಿ ಲಕ್ಷಾಂತರ ರೂಪಾಯಿ ಪಡೆದು ಕೊಂಡು ಬಿಟ್ಟು ಕಳುಹಿಸಿದ್ದರು. ಈ ಬಗ್ಗೆ ವಸಂತ್ ದೂರು ನೀಡಿದ್ದರು’ ಎಂದೂ ಹೇಳಿವೆ.

ADVERTISEMENT

ಡ್ರಗ್ಸ್: ಆರೋಪಿಗೆ 1 ವರ್ಷ ಜೈಲು

ಡ್ರಗ್ಸ್ ಸಾಗಣೆ ಹಾಗೂ ಮಾರಾಟವನ್ನೇ ವೃತ್ತಿ ಮಾಡಿಕೊಂಡಿದ್ದ ಆರೋಪಿ ಸುನೀಲ್ ಅಲಿಯಾಸ್ ಕುಟ್ಟಿ ಪಿಲ್ಲಿ (29) ಎಂಬುವವರನ್ನು ‘ಮಾದಕ ದ್ರವ್ಯ ಹಾಗೂ ನಿದ್ರಾಜನ್ಯ ವಸ್ತುಗಳ ಅಕ್ರಮ ಸಾಗಾಣಿಕೆ ತಡೆ (ಪಿಐಟಿ–ಎನ್‌ಡಿಪಿಎಸ್)’ ಕಾಯ್ದೆಯಡಿ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

‘ಆರೋಪಿ ಸುನೀಲ್, ಯುವ ಜನತೆಯನ್ನು ಮಾದಕ ವ್ಯಸನಿಗಳಾಗಿಸುತ್ತಿದ್ದ. ಸಮಾಜದ ಸ್ವಾಸ್ಥ್ಯ ಹಾಳು ಮಾಡು ತ್ತಿದ್ದ. ಈತನ ವಿರುದ್ಧ ನಗರದ ಹಲವು ಠಾಣೆಗಳ ವ್ಯಾಪ್ತಿಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣಗಳು ದಾಖ ಲಾಗಿದ್ದವು’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ಸುನೀಲ್‌ನನ್ನು ಪಿಐಟಿ–ಎನ್‌ಡಿ ಪಿಎಸ್ ಕಾಯ್ದೆಯಡಿ ಬಂಧಿಸಲು ಕೋರಿ ಕಮಿಷನರ್ ಅವರಿಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಇದಕ್ಕೆ ಒಪ್ಪಿಗೆ ನೀಡಿರುವ ಕಮಿಷನರ್, ತಮ್ಮ ಅಧಿಕಾರ ಚಲಾ ಯಿಸಿ ಆರೋಪಿಯನ್ನು ಒಂದು ವರ್ಷ ಜೈಲಿನಲ್ಲಿಡಲು ಆದೇಶಿಸಿದ್ದಾರೆ. ಸದ್ಯ ಆತ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.