
‘ಕಾಲಚಕ್ರ’ ನಾಟಕ ಪ್ರದರ್ಶನ 2ಕ್ಕೆ
ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯು ಇದೇ 2ರಂದು ಸಂಜೆ 6.30ಕ್ಕೆ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ‘ಕಾಲಚಕ್ರ’ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ. ಗಾಯತ್ರಿ ಅವರು ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ರಂಗಸಮಾಜದ ಸದಸ್ಯರಾದ ಶಶಿಧರ್ ಭಾರಿಘಾಟ್, ಕೆ. ರಾಮಕೃಷ್ಣಯ್ಯ, ಕಲಾವಿದೆ ಲಕ್ಷ್ಮೀ ಚಂದ್ರಶೇಖರ್, ಕಲಬುರಗಿ ರಂಗಾಯಣದ ನಿರ್ದೇಶಕಿ ಸುಜಾತ ಜಂಗಮಶೆಟ್ಟಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ನಾಟಕವನ್ನು ಹುಲಗಪ್ಪ ಕಟ್ಟಿಮನಿ ಅವರು ನಿರ್ದೇಶಿಸಿದ್ದಾರೆ.
‘ಬೈಠಕ್’ ಸಂಗೀತ ಕಛೇರಿ 4ಕ್ಕೆ
ಬೆಂಗಳೂರು: ಶ್ರೀರಾಮ ಕಲಾ ವೇದಿಕೆಯಿಂದ ಜ. 4ರಂದು ಸಂಜೆ 5.30ಕ್ಕೆ ಮಲ್ಲೇಶ್ವರದ ಷಡ್ಜ ಕಲಾ ಕೇಂದ್ರದಲ್ಲಿ ಬೈಠಕ್ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದೆ.
ಗಾಯಕಿ ಸುಷ್ಮಾ ಕಶ್ಯಪ್ ಅವರಿಗೆ ಶಶಿಭೂಷಣ್ ಗುರ್ಜರ್ (ತಬಲಾ), ಸಮೀರ್ ಹವಾಲ್ದಾರ್ (ಹಾರ್ಮೋನಿಯಂ) ಸಾಥ್ ನೀಡಲಿದ್ದಾರೆ.
‘ಒಮ್ಮೆ ಹೆಣ್ಣಾಗು’ ನಾಟಕ ಪ್ರದರ್ಶನ
ಬೆಂಗಳೂರು: ಮೈಸೂರಿನ ರಂಗಾಯಣದವರು ಜ.4ರಂದು ಮಧ್ಯಾಹ್ನ 3.30 ಹಾಗೂ ಸಂಜೆ 7.30ಕ್ಕೆ ಜೆ.ಪಿ.ನಗರದಲ್ಲಿರುವ ರಂಗಶಂಕರದಲ್ಲಿ ‘ಒಮ್ಮೆ ಹೆಣ್ಣಾಗು’ ನಾಟಕ ಪ್ರದರ್ಶನ ಹಮ್ಮಿಕೊಂಡಿದ್ದಾರೆ.
ಲೇಖಕಿ ಬಾನು ಮುಷ್ತಾಕ್ ಅವರ ‘ಎದೆಯ ಹಣತೆ’ ಸಂಕಲನದ ಆಯ್ದ ಕಥೆಗಳನ್ನು ರಂಗದ ಮೇಲೆ ತರಲಾಗುತ್ತಿದೆ. ಸವಿತಾ ರಾಣಿ ಅವರು ಈ ನಾಟಕ ನಿರ್ದೇಶಿಸಿದ್ದಾರೆ. ಟಿಕೆಟ್‌ಗಳು ಬುಕ್ ಮೈ ಶೊದಲ್ಲಿ ಲಭ್ಯ.
ಪ್ರತಿ ಗುರುವಾರ ಪ್ರಕಟವಾಗುವ ‘ಸಾಂಸ್ಕೃತಿಕ ಮುನ್ನೋಟ’ ಅಂಕಣದಲ್ಲಿ ಪ್ರಕಟಿಸಲು ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ ವಿವರಗಳನ್ನು ಈ ಕೆಳಗಿನ ಇ–ಮೇಲ್‌ಗೆ (ಬುಧವಾರ ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.