ಗಾಂಧಿ ಸ್ಮೃತಿ ಸಂಗೀತೋತ್ಸವ
ಬೆಂಗಳೂರು: ನಗರದ ಸ್ವರ ಫೌಂಡೇಷನ್ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಅ.3ರ ಸಂಜೆ 5 ಗಂಟೆಗೆ ‘ಗಾಂಧಿ ಸ್ಮೃತಿ’ ಸಂಗೀತೋತ್ಸವ ಹಮ್ಮಿಕೊಂಡಿದೆ.
ಕಲಾವಿದರಾದ ಪ್ರವೀಣ್ ಗೋಡ್ಖಿಂಡಿ, ರವೀಂದ್ರ ಯಾವಗಲ್, ಮುದ್ದುಮೋಹನ್, ವಿಶ್ವನಾಥ ನಾಕೋಡ್, ವ್ಯಾಸಮೂರ್ತಿ ಕಟ್ಟಿ, ರಾಜೇಂದ್ರ ನಾಕೋಡ್, ಪಂಚಾಕ್ಷರಿ ಹಿರೇಮಠ, ಪ್ರದ್ಯುಮ್ನ ಕರ್ಪೂರ, ವೈಶಾಲಿ ಅವರು ಕಾರ್ಯಕ್ರಮದಲ್ಲಿ ಗಾಂಧೀಜಿ ಅವರಿಗೆ ಸಂಗೀತ ನಮನ ಸಲ್ಲಿಸುತ್ತಾರೆ.
ಸಂಗೀತೋತ್ಸವಕ್ಕೆ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ್ ಚಾಲನೆ ನೀಡುತ್ತಾರೆ. ನಿವೃತ್ತ ಐಎಎಸ್ ಅಧಿಕಾರಿಗಳಾದ ಚಿರಂಜೀವ್ ಸಿಂಘ್, ಕೆ.ಜೈರಾಜ್, ಶಿವಯೋಗಿ ಕಳಸದ ಅವರು ಅತಿಥಿಗಳಾಗಿ ಭಾಗವಹಿಸುತ್ತಾರೆ. ಎಲ್ಲರಿಗೂ ಪ್ರವೇಶ ಉಚಿತ ಎಂದು ಪ್ರಕಟಣೆ ತಿಳಿಸಿದೆ.
ಗಾಂಧಿ ವ್ಯಂಗ್ಯಚಿತ್ರ ಪ್ರದರ್ಶನ
ಬೆಂಗಳೂರು: ಕರ್ನಾಟಕ ಗಾಂಧಿ ಸ್ಮಾರಕ ನಿಧಿಯು 75ನೇ ವಾರ್ಷಿಕೋತ್ಸವ ಆಚರಣೆಯ ಅಂಗವಾಗಿ ಅ.4ರಿಂದ ಅ.31ರವರೆಗೆ ಎಂ.ಜಿ ರಸ್ತೆಯಲ್ಲಿರುವ ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯಲ್ಲಿ ‘ಗಾಂಧಿ’ ವ್ಯಂಗ್ಯಚಿತ್ರ ಪ್ರದರ್ಶನ ಹಮ್ಮಿಕೊಂಡಿದೆ.
ಭಾನುವಾರ ಮತ್ತು ಸಾರ್ವಜನಿಕ ರಜಾ ದಿನ ಹೊರತುಪಡಿಸಿ, ಉಳಿದ ದಿನಗಳು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಈ ಪ್ರದರ್ಶನ ನಡೆಯಲಿದೆ. ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ. ಕೃಷ್ಣ ಅವರು ಈ ಪ್ರದರ್ಶನ ಉದ್ಘಾಟಿಸುತ್ತಾರೆ.
ಈ ಪ್ರದರ್ಶನದಲ್ಲಿ 23 ದೇಶಗಳ 110 ವ್ಯಂಗ್ಯಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಪ್ರವೇಶ ಉಚಿತ ಎಂದು ಪ್ರಕಟಣೆ ತಿಳಿಸಿದೆ.
‘ಧ್ವನಿ’ ಸಂಗೀತ ಉತ್ಸವ
ಬೆಂಗಳೂರು: ಬೆಂಗಳೂರು ಕಿಡ್ನಿ ಫೌಂಡೇಷನ್ ಅ.4 ಮತ್ತು ಅ.5ರಂದು ಕೆ.ಆರ್. ರಸ್ತೆಯಲ್ಲಿರುವ ಬೆಂಗಳೂರು ಗಾಯನ ಸಮಾಜದಲ್ಲಿ ‘ಧ್ವನಿ–ಬಿಕೆಎಫ್ ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಹಿಂದೂಸ್ತಾನಿ ಸಂಗೀತ ಉತ್ಸವ’ ಹಮ್ಮಿಕೊಂಡಿದೆ.
ಈ ಕಾರ್ಯಕ್ರಮದಿಂದ ಬರುವ ಆದಾಯವನ್ನು ಗ್ರಾಮೀಣ ಭಾಗದ ರೋಗಿಗಳ ಡಯಾಲಿಸಿಸ್ ಸೇವೆಗೆ ಒಳಸಿಕೊಳ್ಳಲಾಗುತ್ತದೆ. ಶನಿವಾರ ಸಂಜೆ 5 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಅಂದು ಎರಡು ಸಂಗೀತ ಕಛೇರಿ ನಡೆಯಲಿದೆ. ಭಾನುವಾರ ಬೆಳಿಗ್ಗೆ 9.30ರಿಂದ ಇಡೀ ದಿನ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಎರಡು ದಿನಗಳ ಈ ಉತ್ಸವದಲ್ಲಿ ಶಿವಕುಮಾರ್ ಶರ್ಮಾ, ಎನ್. ರಾಜಂ, ಕಿಶೋರ್ ಅಮೋನ್ಕರ್, ವೆಂಕಟೇಶ್ ಕುಮಾರ್, ವಿಶ್ವಮೋಹನ್ ಭಟ್, ರಶೀದ್ ಖಾನ್, ಗಣಪತಿ ಭಟ್, ಜಯಶ್ರೀ ಪಟ್ನೇಕರ್ ಸೇರಿ ಹೆಸರಾಂತ ಕಲಾವಿದರು ಪಾಲ್ಗೊಳ್ಳುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.
ವಿವರಕ್ಕೆ: 080 26614848 ಅಥವಾ 9901788354
ನೃತ್ಯ ರೂಪಕ ಪ್ರದರ್ಶನ
ಬೆಂಗಳೂರು: ಗೋಬ್ರಹ್ಮ ಪ್ರೊಡಕ್ಷನ್ಸ್ ಮತ್ತು ಶಿವಪ್ರಿಯಾ ಸ್ಕೂಲ್ ಆಫ್ ಡಾನ್ಸ್ ಜಂಟಿಯಾಗಿ ‘ಚಂದ್ರಲೇಖಾ–ದಿ ಲಾಸ್ಟ್ ಕೋರ್ಟಿಸಾನ್’ ಶೀರ್ಷಿಕೆಯಡಿ ಅ.4 ರಂದು ಮಧ್ಯಾಹ್ನ 3 ಮತ್ತು ಸಂಜೆ 7 ಗಂಟೆಗೆ ಮಲ್ಲೇಶ್ವರದಲ್ಲಿರುವ ಚೌಡಯ್ಯ ಸ್ಮಾರಕ ಭವನದಲ್ಲಿ ನೃತ್ಯ ರೂಪಕ ಹಮ್ಮಿಕೊಂಡಿದೆ.
ಪ್ರದರ್ಶನದಲ್ಲಿ ತರಬೇತಿ ಪಡೆದ 80ಕ್ಕೂ ಹೆಚ್ಚು ನೃತ್ಯ ಕಲಾವಿದರು, ಭರತನಾಟ್ಯ, ಕೂಚಿಪುಡಿ, ಕಥಕ್ ಮತ್ತು ಒಡಿಸ್ಸಿ ನೃತ್ಯ ಪ್ರಕಾರಗಳನ್ನು ಸಂಗೀತ ಮತ್ತು ನಾಟಕದೊಂದಿಗೆ ಸಂಯೋಜಿಸಿದ್ದಾರೆ. ಸಂಜಯ್ ಶಾಂತಾರಾಮ್ ಅವರು ಈ ತಂಡವನ್ನು ಮುನ್ನಡೆಸುತ್ತಿದ್ದಾರೆ. ಪ್ರವೀಣ್ ಡಿ. ರಾವ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಟಿಕೆಟ್‌ಗಳು ಬುಕ್ ಮೈ ಶೋ ದಲ್ಲಿ ಲಭ್ಯ ಎಂದು ಪ್ರಕಟಣೆ ತಿಳಿಸಿದೆ.
‘ಸಾಂಸ್ಕೃತಿಕ ಮುನ್ನೋಟ’ ಅಂಕಣದಲ್ಲಿ ಪ್ರಕಟಿಸಲು ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ ವಿವರಗಳನ್ನು ಈ ಕೆಳಗಿನ ಇ–ಮೇಲ್‌ಗೆ (ಬುಧವಾರ ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.