ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕೊರಿಯರ್ ಸೆಂಟರ್‌ಗೆ ಮಂಗಳವಾರ ತಡರಾತ್ರಿ ಬಂದಿದ್ದ ಲೆದರ್ ಬ್ಯಾಗ್‍ವೊಂದರಲ್ಲಿ ₹20 ಲಕ್ಷ ಮೌಲ್ಯದ 400 ಗ್ರಾಂನಷ್ಟು ಮೆಥಾಕ್ವಾಲೋನ್ ಮಾತ್ರೆಗಳು ಪತ್ತೆಯಾಗಿವೆ. ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ವೇಳೆ ಈ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಮಾತ್ರೆಗಳನ್ನು ಬ್ಯಾಗಿನ ಒಳಗೆ ಅಡಗಿಸಿ ಇಡಲಾಗಿತ್ತು. ಇದೇ ಕೇಂದ್ರದಲ್ಲಿ ಇತ್ತೀಚೆಗಷ್ಟೇ ಎಕ್ಸ್‌ಟೆಸಿ ಮಾತ್ರೆಗಳು ಪತ್ತೆಯಾಗಿದ್ದ ಪ್ರಕರಣದಲ್ಲಿ ಬಂಧಿಸಲಾಗಿರುವ ನೈಜೀರಿಯಾ ಮೂಲದ ವ್ಯಕ್ತಿಯ ಹೆಸರಿಗೇ ಈ ಮಾದಕ ವಸ್ತುಗಳು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.