ದಾಬಸ್ ಪೇಟೆ: ಸೋಂಪುರ ಹೋಬಳಿಯ ಚನ್ನೋಹಳ್ಳಿ, ಹಾಲೇನಹಳ್ಳಿ, ಇಮಚೇನಹಳ್ಳಿ, ಕುರುವೆಲ್ ತಿಮ್ಮನಹಳ್ಳಿ, ಕೆರೆಪಾಳ್ಯ, ಹೆಗ್ಗುಂದ, ದಾಬಸ್ ಪೇಟೆ ಪಟ್ಟಣದ ಕೆಇಬಿ ಹಿಂಭಾಗ, ನಿಡವಂದ, ವೀರಸಾಗರ ಗ್ರಾಮಗಳ ಆಂಜನೇಯ ದೇವಾಲಯಗಳು ನರಸೀಪುರ, ಆಗಲಕುಪ್ಪೆ ಮತ್ತು ರಾಮದೇವರ ಬೆಟ್ಟದ ರಾಮ ದೇವಾಲಯಗಳಲ್ಲಿ ಹನುಮ ಜಯಂತಿ ಪ್ರಯುಕ್ತ ವಿಶೇಷ ಪೂಜೆಗಳು ನಡೆದವು.
ನರಸೀಪುರ ಪಂಚಾಯಿತಿಯ ಹೆಗ್ಗುಂದದ ಹಳೇ ಊರು ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವವು ಶುಕ್ರವಾರ ಜರುಗಿತು. ಭಕ್ತರಿಗೆ ಅರವಟ್ಟಿಗೆಗಳ ಮೂಲಕ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಿದರು. ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.
ನಿಜಗಲ್ ಸಿದ್ದರಬೆಟ್ಟದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಹನುಮ ಮಾಲಾಧಾರಿಗಳು ಹನುಮ ಮಾಲೆ ಧರಿಸಿ ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು. ಬೆಟ್ಟವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.