ADVERTISEMENT

ಬೆಂಗಳೂರು ಕಿರುನಾಟಕೋತ್ಸವ –2023: ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 3 ಜುಲೈ 2023, 22:30 IST
Last Updated 3 ಜುಲೈ 2023, 22:30 IST
ಬೆಂಗಳೂರು ಕಿರುನಾಟಕೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತೀರ್ಪುಗಾರರು, ರಂಗಕರ್ಮಿಗಳ ಜೊತೆಯಲ್ಲಿ ಪ್ರಶಸ್ತಿ ಪಡೆದವರು
ಬೆಂಗಳೂರು ಕಿರುನಾಟಕೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತೀರ್ಪುಗಾರರು, ರಂಗಕರ್ಮಿಗಳ ಜೊತೆಯಲ್ಲಿ ಪ್ರಶಸ್ತಿ ಪಡೆದವರು   

ಬೆಂಗಳೂರು: ಬೆಂಗಳೂರು ಕಿರುನಾಟಕೋತ್ಸವ –2023ದಲ್ಲಿ ತೀರ್ಪುಗಾರರಿಂದ ‘ಚೆನ್ನುಡಿ’ ಹಾಗೂ ಪ್ರೇಕ್ಷಕರ ಆಯ್ಕೆಯಿಂದ  ‘ಎತ್ತ ಮುಖ ಮಾಡಲಯ್ಯ ನಾ’  ಅತ್ಯುತ್ತಮ ನಾಟಕ ಪ್ರಶಸ್ತಿ ಪಡೆದುಕೊಂಡಿವೆ.

ಪ್ರವರ ಥಿಯೇಟರ್ ಮತ್ತು ಅಶ್ವಘೋಷ ಥಿಯೇಟರ್ ಟ್ರಸ್ಟ್ ಜಂಟಿ ಸಹಯೋಗದೊಂದಿಗೆ ಆಯೋಜಿಸಿದ್ದ ನಾಟಕೋತ್ಸವ ಆಯೋಜಿಸಲಾಗಿತ್ತು. 

ರಂಗಕರ್ಮಿಗಳಾದ ಲಕ್ಷ್ಮಿ ಚಂದ್ರಶೇಖರ್, ಗೌರಿ ದತ್ತು ಮತ್ತು ಡಾ. ಬೇಲೂರು ರಘುನಂದನ್ ಅವರು ಅಂತಿಮ ಹಂತದ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ರಂಗಕರ್ಮಿಗಳಾದ ಬಿ. ಸುರೇಶ, ಪ್ರಕಾಶಕರಾದ ಜಮೀಲ್ ಸಾವಣ್ಣ, ಕಲಾತ್ಮಕ ನಿರ್ದೇಶಕರಾದ ಹನು ರಾಮಸಂಜೀವ ಮತ್ತು ನಂದೀಶ್ ದೇವ್, ತಾಂತ್ರಿಕ ನಿರ್ದೇಶರಾದ ಮಂಜು ನಾರಾಯಣ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ADVERTISEMENT

ಪ್ರಶಸ್ತಿ ವಿಜೇತರು : ಅತ್ಯುತ್ತಮ ನಾಟಕ (ತೀರ್ಪುಗಾರರ ಆಯ್ಕೆ): ‘ಚೆನ್ನುಡಿ’. ತಂಡ- ಬೆಂಗಳೂರು ಥಿಯೇಟರ್ ಆನ್ಸಂಬಲ್.

ಅತ್ಯುತ್ತಮ ನಾಟಕ (ಪ್ರೇಕ್ಷಕರ ಆಯ್ಕೆ): ‘ಎತ್ತ ಮುಖ ಮಾಡಲಯ್ಯ ನಾ’. ತಂಡ- ಉತ್ಕರ್ಷ್ ಅಭಿನಯ.

‘ಆರ್ .ನಾಗೇಶ್’ ಅತ್ಯುತ್ತಮ ನಿರ್ದೇಶನ: ರೇವಂತ್ ಆರ್ ಮಾಳಿಗೆ. ನಾಟಕ‌- ಕನ್ನಡಿಗ(ಳು). ತಂಡ - ಕರಣ ಥಿಯೇಟರ್

‘ಸಂಚಾರಿ ವಿಜಯ್’ ಅತ್ಯುತ್ತಮ ನಟ: ಪುನೀತ್ ಆರ್.ಎನ್. ನಾಟಕ- ಎತ್ತ ಮುಖ ಮಾಡಲಯ್ಯ ನಾ. ತಂಡ- ಉತ್ಕರ್ಷ್ ಅಭಿನಯ.

‘ಉಮಾಶ್ರೀ’ ಅತ್ಯುತ್ತಮ ನಟಿ: ರಾಣಿ ಪಿ. ವಿಶ್ವನಾಥ್. ನಾಟಕ- ಕನ್ನಡಿಗ(ಳು).

ಅತ್ಯುತ್ತಮ ನಾಟಕ ವಿನ್ಯಾಸ: ಅಭಿಮನ್ಯು ಭೂಪತಿ. ನಾಟಕ- ಚೆನ್ನುಡಿ.

ಅತ್ಯುತ್ತಮ ಕಥೆ (ಸ್ವರಚಿತ): ಅಭಿಮನ್ಯು ಭೂಪತಿ ಮತ್ತು ರೋಹಿತ್ ಎಚ್.ಎನ್. ನಾಟಕ- ಚೆನ್ನುಡಿ.

ಅತ್ಯುತ್ತಮ ಭಿತ್ತಿಪತ್ರ ವಿನ್ಯಾಸ: ಶಶಾಂಕ್ ಆರ್ ಮತ್ತು ವರ್ಷ ಎಸ್. ನಾಟಕ - ಕನ್ನಡಿಗ(ಳು).

ತೀರ್ಪುಗಾರರ ವಿಶೇಷ ಮೆಚ್ಚುಗೆ ಬಾಲ ನಟಿ: ಪುನರ್ವಿ. ನಾಟಕ- ಕನ್ನಡವೆಂದರೆ ಈಗಿನ ಜನರೇಶನ್‌ಗೆ ತೊಂದರೆ. ತಂಡ - ಮಲೆನಾಡು ರಂಗ ತಂಡ.‌‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.