ಎಸ್.ಪಿ ರಸ್ತೆ ಸಮೀಪದ ತಿಗಳರಪೇಟೆ ಪೈಲ್ವಾನ್ ಟಿ. ಅಣ್ಣಯ್ಯಪ್ಪ ಮುಖ್ಯರಸ್ತೆಯಲ್ಲಿ ಕೈಗೆ ಎಟುಕುವ ಮಟ್ಟದಲ್ಲಿರುವ ವಿದ್ಯುತ್ ಕಂಬದ ವೈರ್‌ಗಳು...
ಚಿತ್ರ: ಎಸ್.ಕೆ. ದಿನೇಶ್
ನಗರದ ಪಾದಚಾರಿ ಮಾರ್ಗಗಳು ನಾಗರಿಕರಿಗೆ ಸುರಕ್ಷಿತವಲ್ಲ ಎಂಬ ಆರೋಪ ಆಗಾಗ್ಗೆ ಕೇಳಿಬರುತ್ತಿದೆ. ವ್ಯಾಪಾರಿಗಳು, ಕೇಬಲ್‌ಗಳು, ವಿದ್ಯುತ್ ಕಂಬ, ಟ್ರಾನ್ಸ್‌ಫಾರ್ಮರ್‌ಗಳು ಈ ಮಾರ್ಗವನ್ನು ಆವರಿಸಿಕೊಂಡಿರುತ್ತವೆ. ಇದರಿಂದ ಸಾಕಷ್ಟು ಅಪಘಾತಗಳೂ ಸಂಭವಿಸಿವೆ. ಕಾಡುಗೋಡಿಯಲ್ಲಿ ವಿದ್ಯುತ್ ತಂತಿ ಪಾದಚಾರಿ ಮಾರ್ಗದ ಮೇಲೆ ಬಿದ್ದು ತಾಯಿ–ಮಗು ಸುಟ್ಟು ಹೋಗಿದ್ದು ಇತ್ತೀಚಿನ ದುರಂತ.
ಇಂತಹ ಅವಘಡಗಳಾದಾಗ ಬಿಬಿಎಂಪಿ, ಬೆಸ್ಕಾಂ ಹಾಗೂ ಇತರೆ ಇಲಾಖೆಗಳು ಒಂದಷ್ಟು ಕೆಲಸ ಮಾಡಿ, ನಂತರ ಸುಮ್ಮನಾಗುತ್ತವೆ. ಪಾದಚಾರಿ ಮಾರ್ಗದಲ್ಲಿ ಓಡಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಕ್ರಮ ಕೈಗೊಳ್ಳುವುದಿಲ್ಲ. ನಾಗರಿಕರ ಸಾವಿರಾರು ದೂರು, ನ್ಯಾಯಾಲಯಗಳ ಆದೇಶಗಳೂ ಪಾದಚಾರಿ ಮಾರ್ಗಗಳನ್ನು ಸುರಕ್ಷಿತವಾಗಿರಿಸಿಲ್ಲ. ಜನನಿಬಿಡ ಪಾದಚಾರಿ ಮಾರ್ಗಗಳಲ್ಲಿ ಕೈಗೆಟಕುವಂತಹ ಮಟ್ಟದಲ್ಲಿ ಟ್ರಾನ್ಸ್‌ಫಾರ್ಮರ್, ವಿದ್ಯುತ್ ತಂತಿಗಳಿವೆ. ಇಂತಹ ಕೆಲವು ಸ್ಥಳಗಳಲ್ಲಿನ ಚಿತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ.
ಸೇಂಟ್ ಜೋಸೆಫ್ಸ್ ಪಿಯು ಕಾಲೇಜಿನ ಸಮೀಪದ ರೆಸಿಡೆನ್ಸಿ ರಸ್ತೆಯ ಪಾದಚಾರಿ ಮಾರ್ಗದ ಮೇಲೆಯೇ ಕೇಬಲ್‌ಗಳನ್ನು ಹರಡಿರುವುದು
ಕುಮಾರಕೃಪಾ ಪಾರ್ಕ್ ಪಶ್ಚಿಮದಲ್ಲಿ ಪಾದಚಾರಿ ಮಾರ್ಗಕ್ಕೆ ಹೊಂದಿಕೊಂಡಂತೆ ತೆರೆದುಕೊಂಡಿರುವ ಬೃಹತ್ ಕೇಬಲ್
ರೇಸ್‌ಕೋರ್ಸ್ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಕಾಲಿಗೆ ತಾಗುವಂತಿರುವ ವಿದ್ಯುತ್ ವೈರ್‌ಗಳು
ಕುಮಾರಕೃಪಾ ಪಾರ್ಕ್ ಪಶ್ಚಿಮದಲ್ಲಿ ಪಾದಚಾರಿ ಮಾರ್ಗದಲ್ಲಿ ಕೆಳಮಟ್ಟದಲ್ಲಿರುವ ಟ್ರಾನ್ಸ್‌ಫಾರ್ಮರ್
ಬೊಮ್ಮನಹಳ್ಳಿಯ ಬೇಗೂರು ಮುಖ್ಯರಸ್ತೆಯಲ್ಲಿರುವ ಸಿಗ್ನಲ್ ಬಳಿಯ ಪಾದಚಾರಿ ಮಾರ್ಗದಲ್ಲಿ ವಿದ್ಯುತ್ ಕಂಬಕ್ಕೆ ಸುತ್ತಲಾಗಿರುವ ಕೇಬಲ್‌ಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.