ADVERTISEMENT

ಕ್ಲರ್ಕ್‌ ಹುದ್ದೆ: ನೇಮಕಾತಿ ಪರೀಕ್ಷೆ ಬರೆದಿದ್ದ ನಕಲಿ ಅಭ್ಯರ್ಥಿಗಳು

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2024, 15:58 IST
Last Updated 3 ಏಪ್ರಿಲ್ 2024, 15:58 IST
<div class="paragraphs"><p> ಬಂಧನ</p></div>

ಬಂಧನ

   

ಬೆಂಗಳೂರು: ರಾಷ್ಟ್ರೀಯ ಮಿಲಿಟರಿ ಸ್ಕೂಲ್ ಕ್ಯಾಂಪಸ್‌ನಲ್ಲಿ ಡಿವಿಷನ್ ಕ್ಲರ್ಕ್ ಹುದ್ದೆಗೆ ನಡೆದಿದ್ದ ಪರೀಕ್ಷೆಯಲ್ಲಿ ನಕಲಿ ಅಭ್ಯರ್ಥಿಗಳನ್ನು ಕಳುಹಿಸಿದ್ದ ಇಬ್ಬರು ಅಸಲಿ ಅಭ್ಯರ್ಥಿಗಳನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹರಿಯಾಣದ ಅತೀಶ್‌ (19) ಮತ್ತು ಅಜಯ್ ಕುಮಾರ್(21) ಬಂಧಿತರು.

ADVERTISEMENT

ಮಾರ್ಚ್‌ 24ರಂದು ಕ್ಯಾಂಪಸ್‌ನಲ್ಲಿ ಪರೀಕ್ಷೆ ನಡೆದಿತ್ತು. ಆ ಪರೀಕ್ಷೆಗೆ ಆರೋಪಿಗಳು, ನಕಲಿ ಅಭ್ಯರ್ಥಿಗಳನ್ನು ಕಳುಹಿಸಿದ್ದರು ಎಂದು ಮೂಲಗಳು ಹೇಳಿವೆ.

‘ಶಾಲೆಯ ಅಧಿಕಾರಿ ಸುಮಿತ್ ಧಿಮನ್ ಅವರು ನೀಡಿದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ.’

ಕ್ಲರ್ಕ್ ಹುದ್ದೆಗೆ ಮಾರ್ಚ್‌ 9ರಂದು ನೋಟಿಫಿಕೇಷನ್ ಹೊರಡಿಸಲಾಗಿತ್ತು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದ ಆರೋಪಿಗಳು, ಡಿ.ಡಿ ಮೂಲಕ ಹಣ ಪಾವತಿಸಿದ್ದರು. ಆದರೆ, ಮಾರ್ಚ್‌ 24ರಂದು ನಡೆದಿದ್ದ ಲಿಖಿತ ಪರೀಕ್ಷೆಗೆ ಆರೋಪಿಗಳ ಪರವಾಗಿ ಇಬ್ಬರು ನಕಲಿ ಅಭ್ಯರ್ಥಿಗಳು ಹಾಜರಾಗಿದ್ದರು. ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳ ಬೆರಳಚ್ಚು ಮತ್ತು ಆಧಾರ್ ಕಾರ್ಡ್ ನಕಲು ಪಡೆದುಕೊಳ್ಳಲಾಗಿತ್ತು. ನಂತರ, ನಡೆದ ಕೌಶಲ ಪರೀಕ್ಷೆಗೆ ಅಸಲಿ ಅಭ್ಯರ್ಥಿಗಳೇ ಹಾಜರಾಗಿದ್ದರು. ಆಗ ಅವರ ಬೆರಳಚ್ಚು ಮತ್ತು ಆಧಾರ್‌ಕಾರ್ಡ್ ಹೆಸರು, ಫೋಟೊ ಪರಿಶೀಲನೆ ನಡೆಸಲಾಯಿತು. ದಾಖಲೆಗಳು ಹೊಂದಾಣಿಕೆ ಆಗಿರಲಿಲ್ಲ. ಆಗ ವಂಚನೆ ನಡೆಸಿರುವುದು ಗೊತ್ತಾಗಿದೆ ಎಂದು ಮೂಲಗಳು ಹೇಳಿವೆ. ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.