ಎಫ್‌ಐಆರ್
(ಸಾಂದರ್ಭಿಕ ಚಿತ್ರ)
ಬೆಂಗಳೂರು: ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯ ಬೆಟ್ಟಹಲಸೂರು ಬಳಿಯ ಜಸ್ಟ್‌ಬೇಕ್ ಕೇಕ್ ಫ್ಯಾಕ್ಟರಿಯಲ್ಲಿ ಹೈಡ್ರಾಲಿಕ್ ಲಿಫ್ಟ್‌ನಲ್ಲಿ ತೆರಳುವಾಗ ಕಾರ್ಮಿಕರೊಬ್ಬರ ತಲೆಗೆ ಮಹಡಿ (ಆರ್‌ಸಿಸಿ ಚಾವಣಿ) ತಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಭೂಪೇಂದ್ರ ಚೌಧರಿ(19) ಮೃತ ಕಾರ್ಮಿಕ.
ಭೂಪೇಂದ್ರ ಚೌಧರಿ ಅವರ ಸಂಬಂಧಿ ಮುಕೇಶ್ ಕುಮಾರ್ ಚೌಧರಿ ಅವರು ನೀಡಿದ ದೂರು ಆಧರಿಸಿ ಕಂಪನಿ ಮಾಲೀಕ, ಹೈಡ್ರಾಲಿಕ್ ಲಿಫ್ಟ್ ಆಪರೇಟರ್ ಬಿ.ಕೆ.ಲಕ್ಷ್ಮಿ, ಫ್ಯಾಕ್ಟರಿ ಉಸ್ತುವಾರಿ ರಾಜಶೇಖರ್ ಅವರ ವಿರುದ್ಧ ನಿರ್ಲಕ್ಷ್ಯ ಆರೋಪದ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
‘ಭೂಪೇಂದ್ರ ಚೌಧರಿ ಹಾಗೂ ಮುಕೇಶ್ ಕುಮಾರ್ ಚೌಧರಿ ಇಬ್ಬರೂ ಕೇಕ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಫ್ಯಾಕ್ಟರಿಯ ಎರಡನೇ ಮಹಡಿಗೆ ವಸ್ತುಗಳನ್ನು ಕೊಂಡೊಯ್ಯಲು ಹೈಡ್ರಾಲಿಕ್ ಲಿಫ್ಟ್ ವ್ಯವಸ್ಥೆಯಿದೆ. ಮಂಗಳವಾರ ಮಧ್ಯರಾತ್ರಿ ಭೂಪೇಂದ್ರ ಅವರು ಎರಡನೇ ಮಹಡಿಗೆ ವಸ್ತುಗಳನ್ನು ಸಾಗಣೆ ಮಾಡುತ್ತಿದ್ದರು. ಆಗ ಎರಡನೇ ಮಹಡಿಯ ಆರ್‌ಸಿಸಿ ಭೂಪೇಂದ್ರ ಅವರ ತಲೆಗೆ ತಗುಲಿದೆ. ಬಲವಾದ ಪೆಟ್ಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ಹೇಳಿದರು.
ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.