ಬೆಂಗಳೂರು ಮಳೆ
ಬೆಂಗಳೂರು: ನಗರದ ಹಲವು ಪ್ರದೇಶಗಳಲ್ಲಿ ಶುಕ್ರವಾರ ಸಂಜೆ ಬಿರುಸಿನಿಂದ ಮಳೆಯಾಯಿತು.
ಕೆಲವು ದಿನಗಳಿಂದ ಮಳೆಯಾಗುತ್ತಿದ್ದು, ಶುಕ್ರವಾರ ಮೋಡ ಕವಿದ ವಾತಾವರಣ ಇತ್ತು. ಕತ್ತಲಾಗುತ್ತಿದ್ದಂತೆ ಗುಡುಗು ಸಹಿತ ಮಳೆಯಾಯಿತು.
ಹೆಬ್ಬಾಳದಿಂದ ವಿಮಾನ ನಿಲ್ದಾಣದ ಕಡೆಗೆ, ಬೊಮ್ಮನಹಳ್ಳಿಯಿಂದ ರೂಪೇನ ಅಗ್ರಹಾರ, ವೀರಸಂದ್ರ ಜಂಕ್ಷನ್‌ನಿಂದ ಹೊಸೂರು ಕಡೆಗೆ ಸಾಗುವ ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಡಕುಂಟಾಯಿತು.
ಗೊಟ್ಟಿಗೆರೆಯಲ್ಲಿ 3.4 ಸೆಂ.ಮೀ., ಚೌಡೇಶ್ವರಿ 2.9 ಸೆಂ.ಮೀ., ಕಾಡುಗೋಡಿ 2.6 ಸೆಂ.ಮೀ., ಜಕ್ಕೂರು 2.2 ಸೆಂ.ಮೀ., ಸಿಂಗಸಂದ್ರ 2.2 ಸೆಂ.ಮೀ., ಹಗದೂರು 2.2 ಸೆಂ.ಮೀ., ದೊಡ್ಡನೆಕ್ಕುಂದಿ 1.7 ಸೆಂ.ಮೀ., ವಿದ್ಯಾರಣ್ಯಪುರ 1.5 ಸೆಂ.ಮೀ., ಬೆಳ್ಳಂದೂರಿನಲ್ಲಿ 1.3 ಸೆಂ.ಮೀ. ಮಳೆ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.