ಅನಿಲ್ ಕುಂಬ್ಳೆ ವೃತ್ತದಲ್ಲಿ ಬುಧವಾರ ರಾತ್ರಿ ಸುರಿದ ಬಿರುಸಿನ ಮಳೆಯಲ್ಲಿ ಸಾಗಿದ ವಾಹನಗಳು
ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್ ಜಿ
ಬೆಂಗಳೂರು: ನಗರದ ಕೆಲವು ಪ್ರದೇಶಗಳಲ್ಲಿ ಬುಧವಾರ ರಾತ್ರಿ ಭಾರಿ ಮಳೆಯಾಯಿತು.
ಎರಡು ದಿನಗಳಿಂದ ಮಳೆ ಬಿಡುವು ನೀಡಿದ್ದರಿಂದ, ನಗರದಲ್ಲಿ ಉಷ್ಣಾಂಶ ಹೆಚ್ಚಾಗಿತ್ತು. ಬುಧವಾರ ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣವಿತ್ತು. ರಾತ್ರಿ 8ರ ವೇಳೆಯಲ್ಲಿ ಭಾರಿ ಮಳೆ ಸುರಿದು, ತಡರಾತ್ರಿಯವರೆಗೂ ತುಂತುರು ಮುಂದುವರಿದಿತ್ತು.
ಕಸ್ತೂರಿನಗರದಿಂದ ಹೆಬ್ಬಾಳ, ವಿಂಡ್ಸರ್ ಮ್ಯಾನರ್ ಕೆಳಸೇತುವೆ, ಕೋನಪ್ಪನ ಅಗ್ರಹಾರದಿಂದ ಹೊಸೂರು ರಸ್ತೆ, ಮೈಸೂರು ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಕಾಮಾಕ್ಷಿ ಪಾಳ್ಯ ಬಸ್ ನಿಲ್ದಾಣದ ಬಳಿ ಮರವೊಂದು ರಸ್ತೆಗೆ ಉರುಳಿ ಬಿದ್ದಿದ್ದರಿಂದ ಸುಮನಹಳ್ಳಿ ಕಡೆಗೆ ಸಂಚಾರ ಬಹುತೇಕ ಸ್ಥಗಿತಗೊಂಡಿತ್ತು.
ಹೆಚ್ಚು ಮಳೆ: ಹಂಪಿ ನಗರದಲ್ಲಿ 3.7 ಸೆಂ.ಮೀ, ಪುಲಕೇಶಿನಗರದಲ್ಲಿ 2.8 ಸೆಂ.ಮೀ, ಬಸವೇಶ್ವರನಗರದಲ್ಲಿ 2.5 ಸೆಂ.ಮೀ, ಸಂಪಂಗಿರಾಮನಗರದಲ್ಲಿ 2 ಸೆಂ.ಮೀ, ಪೂರ್ವ ಮನೋರಾಯನಪಾಳ್ಯ, ವಿದ್ಯಾಪೀಠದಲ್ಲಿ ತಲಾ 1.9 ಸೆಂ.ಮೀ, ವಿಶ್ವೇಶ್ವರಪುರ, ದೊರೆಸಾನಿ ಪಾಳ್ಯ, ವಿ.ನಾಗೇನಹಳ್ಳಿ, ವನ್ನಾರ್‌ಪೇಟೆ, ರಾಜಮಹಲ್ ಗುಟ್ಟಹಳ್ಳಿಯಲ್ಲಿ ತಲಾ 1.3 ಸೆಂ.ಮೀ, ಪೂರ್ವ ಬಾಣಸವಾಡಿ, ಮಾರತ್‌ಹಳ್ಳಿ, ರಾಜಾಜಿನಗರ, ಬಸವನಪುರ, ಕೊಡಿಗೇಹಳ್ಳಿಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.