ADVERTISEMENT

ಬೆಂಗಳೂರು | ನಾಯಿ ದಾಳಿ: ಮಹಿಳೆಗೆ ಗಂಭೀರ ಗಾಯ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 17:10 IST
Last Updated 30 ಜನವರಿ 2026, 17:10 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ನಗರದ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಸಾಕು ನಾಯಿ ದಾಳಿ ನಡೆಸಿದ್ದು, ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಹಿಳೆಯ ಮುಖ ಮತ್ತು ಕತ್ತಿನ ಭಾಗದಲ್ಲಿ ಗಾಯಗಳಾಗಿವೆ. ಎಚ್‌.ಎಸ್‌.ಆರ್ ಲೇಔಟ್‌ನ ಟೀಚರ್ಸ್ ಕಾಲೊನಿಯಲ್ಲಿ ಜ.26ರಂದು ಬೆಳಿಗ್ಗೆ ಈ ಘಟನೆ ನಡೆದಿದೆ.

ಪ್ರತಿದಿನದಂತೆ ಮನೆಯ ಎದುರು ಮಹಿಳೆ ವಾಕಿಂಗ್‌ಗೆ ತೆರಳಿದ್ದರು. ಅವರ ಪಕ್ಕದ ಮನೆಯ ಸಾಕು ನಾಯಿ ಏಕಾಏಕಿ ದಾಳಿ ನಡೆಸಿತ್ತು. ನಾಯಿಯು ಮಹಿಳೆಯ ಕತ್ತಿನ ಭಾಗಕ್ಕೆ ಕಚ್ಚಿದೆ. ಮಹಿಳೆಯನ್ನು ರಕ್ಷಿಸಲು ಮುಂದಾದ ವ್ಯಕ್ತಿಯ ಮೇಲೆಯೂ ನಾಯಿ ದಾಳಿ ನಡೆಸಿದೆ ಎಂದು ಮೂಲಗಳು ಹೇಳಿವೆ.

ADVERTISEMENT

ದಾಳಿ ನಡೆಸಿದ ನಾಯಿಯು ಅಮರೇಶ್ ರೆಡ್ಡಿ ಎಂಬುವವರಿಗೆ ಸೇರಿದ್ದು, ನಾಯಿಯನ್ನು ಸರಿಯಾಗಿ ಮನೆಯ ಒಳಗೆ ಕಟ್ಟಿಹಾಕದೇ ಹೊರಕ್ಕೆ ಬಿಟ್ಟಿದ್ದಾರೆ ಎಂಬ ದೂರಿದೆ. ಗಾಯಗೊಂಡಿರುವ ಮಹಿಳೆಯ ಪತಿ ಎಚ್‌.ಎಸ್‌.ಆರ್ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.