ADVERTISEMENT

ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರೋತ್ಸವಕ್ಕೆ ಪ್ರವೇಶಗಳ ಆಹ್ವಾನ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 15:57 IST
Last Updated 29 ಜನವರಿ 2026, 15:57 IST
<div class="paragraphs"><p>ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರೋತ್ಸವ</p></div>

ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರೋತ್ಸವ

   

ಬೆಂಗಳೂರು: ಕಿರುಚಿತ್ರ ಪ್ರಶಸ್ತಿಗಳಿಗಾಗಿ ಭಾರತದ ಏಕೈಕ ಆಸ್ಕರ್‌ ಅಕಾಡೆಮಿಕ್‌ ಅರ್ಹತಾ ಉತ್ಸವವಾದ ‘ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರೋತ್ಸವ’ಕ್ಕೆ (ಬಿಐಎಸ್‌ಎಫ್‌ಎಫ್‌) ಫೆ.1ರಿಂದ ಚಲನಚಿತ್ರಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.

ಯುವ ಮತ್ತು ಹವ್ಯಾಸಿ ಚಲನಚಿತ್ರ ನಿರ್ಮಾಪಕರಿಗೆ ಒಂದು ವೇದಿಕೆಯಾಗಿ ಬಿಐಎಸ್‌ಎಫ್‌ಎಫ್‌ ರಚಿಸಲಾಗಿದೆ. ಅಲ್ಲಿ ಕಿರುಚಿತ್ರಗಳನ್ನು ಪ್ರದರ್ಶಿಸಬಹುದು. ಫೆ. 28ರವರೆಗೆ ಉಚಿತವಾಗಿ ಅವಕಾಶ ನೀಡಲಾಗಿದೆ. ಮಾರ್ಚ್‌ 1ರಿಂದ ನಿಯಮಿತ ಶುಲ್ಕ ಅನ್ವಯವಾಗುತ್ತದೆ. ಕನ್ನಡ ಅಥವಾ ಕರ್ನಾಟಕದ ಇತರ ಪ್ರಾದೇಶಿಕ ಭಾಷೆಗಳಲ್ಲಿ ಚಿತ್ರ ತಯಾರಾಗಿರಬೇಕು. ಚಿತ್ರವು 30 ನಿಮಿಷ ಮೀರಿರಬಾರದು. ಈ ವರ್ಷದ ಜ.1ರ ನಂತರ ನಿರ್ಮಿಸಿರಬೇಕು. ಇಂಗ್ಲಿಷ್‌ನಲ್ಲಿ ಉಪಶೀರ್ಷಿಕೆ ಹೊಂದಿರಬೇಕು. ಏಪ್ರಿಲ್‌ 30 ಪ್ರವೇಶ ಪತ್ರ ಸಲ್ಲಿಕೆಗೆ ಕೊನೇ ದಿನಾಂಕವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ADVERTISEMENT

ಸಲ್ಲಿಕೆಗೆ ಮತ್ತು ವಿವರಗಳಿಗೆ ವೆಬ್‌ಸೈಟ್‌: www.bisff.in, ಮೊಬೈಲ್‌ ನಂಬರ್‌: 9986863615 ಸಂಪರ್ಕಿಸಬಹುದು. ಇ–ಮೇಲ್‌: bisffblr@gmail.com, ಸಾಮಾಜಿಕ ಜಾಲತಾಣ: https://beacons.ai/bisffblr ವೀಕ್ಷಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.