ADVERTISEMENT

ಬಾಲಕನಿಗೆ ಡ್ರಗ್ಸ್ ಸೇವನೆ ಮಾಡಿಸಿ ವಿವಸ್ತ್ರಗೊಳಿಸಿ ಹಲ್ಲೆ

ಕಾನೂನು ಸಂಘರ್ಷಕ್ಕೆ ಒಳಗಾದ ಆರು ಬಾಲಕರ ಕೃತ್ಯ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 14:19 IST
Last Updated 9 ಅಕ್ಟೋಬರ್ 2025, 14:19 IST
<div class="paragraphs"><p>ಡ್ರಗ್ಸ್</p></div>

ಡ್ರಗ್ಸ್

   

(ಐಸ್ಟೋಕ್ ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಬಾಲಕನೊಬ್ಬನಿಗೆ ಡ್ರಗ್ಸ್‌ ತೆಗೆದುಕೊಳ್ಳುವಂತೆ ಬಲವಂತ ಮಾಡಿ, ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದ ಕಾನೂನು ಸಂಘರ್ಷಕ್ಕೆ ಒಳಗಾದ ಆರು ಬಾಲಕರನ್ನು ಗೋವಿಂದರಾಜನಗರ ಠಾಣೆಯ ಪೊಲೀಸರು, ಬಾಲನ್ಯಾಯ ಮಂಡಳಿಗೆ ಕಳುಹಿಸಿದ್ದಾರೆ.

ADVERTISEMENT

ಠಾಣೆಯ ಸಾಮಾಜಿಕ ಜಾಲತಾಣ ವಿಭಾಗದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದ ವೇಳೆ ವಿಡಿಯೊವೊಂದು ಕಾಣಿಸಿತ್ತು. ಆ ವಿಡಿಯೊದಲ್ಲಿ, ಒಬ್ಬ ಬಾಲಕನಿಗೆ ಕಾನೂನು ಸಂಘರ್ಷಕ್ಕೆ ಒಳಗಾದ ಆರು ಬಾಲಕರು ಸೇರಿಕೊಂಡು ಬೆತ್ತಲೆಗೊಳಿಸಿ ಹಲ್ಲೆ ನಡೆಸಿರುವುದು ಹಾಗೂ ಬಲವಂತದಿಂದ ಡ್ರಗ್ಸ್ ಸೇವನೆ ಮಾಡಿಸುತ್ತಿರುವ ದೃಶ್ಯವು ಸೆರೆಯಾಗಿತ್ತು. ಘಟನೆಯ ಸಂಬಂಧ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು ಎಂದು ಮೂಲಗಳು ಹೇಳಿವೆ.

‘ಪ್ರಕರಣ ಭೇದಿಸಲು ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು. ಅ.5ರಂದು ನೊಂದ ಬಾಲಕ ಪತ್ತೆಯಾಗಿದ್ದ. ಆತ ನೀಡಿದ ಮಾಹಿತಿ ಆಧರಿಸಿ, ಕೃತ್ಯ ಎಸಗಿದ ಆರು ಬಾಲಕರನ್ನು ಪತ್ತೆ ಮಾಡಲಾಯಿತು. ನೊಂದ ಬಾಲಕನ ವಿಚಾರಣೆ ನಡೆಸಿದಾಗ ಆರು ತಿಂಗಳ ಹಿಂದೆ ನಡೆದ ಘಟನೆ ಎಂಬುದು ಗೊತ್ತಾಗಿದೆ’ ಎಂದು ಮೂಲಗಳು ಹೇಳಿವೆ.

‘ನನ್ನ ಮನೆಯೊಂದಕ್ಕೆ ಕರೆದೊಯ್ದು ಕೊಠಡಿಯಲ್ಲಿ ಕೂಡಿ ಹಾಕಿದ್ದರು. ಸಿಗರೇಟ್‌ನಲ್ಲಿ ಮಾದಕ ವಸ್ತು ತುಂಬಿ ಸೇವನೆ ಮಾಡುವಂತೆ ಒತ್ತಾಯಿಸಿದ್ದರು. ಸಿಗರೇಟ್‌ ಸೇದಲು ನಿರಾಕರಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದರು. ಘಟನೆಯನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು ಎಂಬುದಾಗಿ ನೊಂದ ಬಾಲಕ ತಿಳಿಸಿದ್ದ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.