ADVERTISEMENT

ಉಬರ್‌ ಆಟೋ ನಿರೀಕ್ಷಣಾ ಸಮಯ 71 ನಿಮಿಷ: ದಂಗಾದ ಬೆಂಗಳೂರು ನಿವಾಸಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಮೇ 2023, 11:38 IST
Last Updated 17 ಮೇ 2023, 11:38 IST
   

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನ ಟ್ರಾಫಿಕ್‌ ಜಾಮ್ ಸಮಸ್ಯೆ ಯಾವತ್ತೂ ಚರ್ಚೆಯ ವಿಷಯ. ಇಲ್ಲಿನ ಜನಗಳ ದೈನಂದಿನ ಜೀವನದಲ್ಲಿ ವಾಹನ ದಟ್ಟಣೆ ಹಾಸುಹೊಕ್ಕಾಗಿ ಬಿಟ್ಟಿದೆ ಎಂದರೆ ಅತಿಶಯೋಕ್ತಿ ಅನಿಸದು. ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆ ಬಗ್ಗೆ ಹಲವು ಜೋಕ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ.

ಬೆಂಗಳೂರಿನ ನಿವಾಸಿಯೊಬ್ಬರು ಉಬರ್ ಆಟೋ ಬುಕ್‌ ಮಾಡಿ ಅದರ ಸ್ಕ್ರೀನ್ ಶಾಟ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರಲ್ಲಿ ವಿವಿಧ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಅನುಶಾಂಕ್‌ ಎಂಬವರು ಉಬರ್ ಆಟೋ ಬುಕ್‌ ಮಾಡಿದ್ದು, 24 ಕಿ.ಮಿ ದೂರದಿಂದ ಆಟೋ ಬರುವುದಾಗಿಯೂ, 71 ನಿಮಿಷ ನಿರೀಕ್ಷಣಾ ಸಮಯ ಎಂದು ತೋರಿಸಿದೆ. ಇದರ ಫೋಟೊವನ್ನು ಅವರು ಹಂಚಿಕೊಂಡಿದ್ದು, ‘ಅವರು ಬಂದರೆ ಅವರಿಗೆ ಅಪಾರ ಗೌರವ‘ ಎಂದು ಬರೆದುಕೊಂಡಿದ್ದಾರೆ.

ADVERTISEMENT

ಅವರ ಈ ಪೋಸ್ಟ್‌ಗೆ ಟ್ವೀಟ್‌ನಲ್ಲಿ ಥರಹೇವಾರಿ ಪ್ರತಿಕ್ರಿಯೆಗಳು ಬಂದಿವೆ.

‘ವರ್ಕ್‌ ಫ್ರಮ್ ಆಫೀಸಿನಲ್ಲಿರುವ ಎಲ್ಲಾ ಎಚ್‌.ಆರ್‌ಗಳಿಗೂ ಈ ಚಿತ್ರವನ್ನು ಕಳಿಸಬೇಕು‘ ಎಂದು ಓರ್ವ ಟ್ವಿಟರ್‌ ಬಳಕೆದಾರ ಕಮೆಂಟ್ ಮಾಡಿದ್ದಾರೆ.

‘ಎರಡು ಹಾಗೂ ಮೂರನೇ ಹಂತದ ನಗರಗಳಿಗೆ ಹೋಗಲು ಇದು ಸರಿಯಾದ ಸಮಯ ಎಂದು ನನಗೆ ಅನಿಸುತ್ತಿದೆ. ಹೆಚ್ಚಿನ ಉತ್ಪಾದಕತೆ, ಜೀವನ ನಿರ್ವಹಣಾ ವೆಚ್ಚ ಕಡಿಮೆ ಇರುವ ಹಾಗೂ ಜೀವನ ಸರಳಗೊಳಿಸುವ ನಗರಗಳಿಗೆ ಬದಲಿಸಲು ಎಂಎನ್‌ಸಿ ಕಂಪನಿಗಳು ಯೋಚನೆ ಮಾಡಬೇಕಿದೆ‘ ಎಂದು ಇನ್ನೊಬ್ಬರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.