
ಬೆಂಗಳೂರು: ಎಚ್.ಎ.ಎಲ್ ಏರ್‌ಪೋರ್ಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮಾರತ್ತಹಳ್ಳಿ ಸೇತುವೆ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಡಿ.22ರಿಂದ ಸಂಚಾರ ಮಾರ್ಗವನ್ನು ಮಾರ್ಪಾಡು ಮಾಡಲಾಗಿದೆ.
ನಿರ್ಬಂಧಿತ ರಸ್ತೆ ಮಾರ್ಗ:
* ದೇವರಬೀಸನಹಳ್ಳಿ, ಕಾಡುಬೀಸನಹಳ್ಳಿ ಕಡೆಯಿಂದ ಕೆಎಂಎಲ್ ಮಾಲ್ ಸರ್ವಿಸ್ ರಸ್ತೆಯ ಮೂಲಕ ಸಂಚರಿಸಿ ಮಾರತ್ತಹಳ್ಳಿ ಸೇತುವೆ ಜಂಕ್ಷನ್ ಬಳಿ ಬಲಕ್ಕೆ ತಿರುವು ಪಡೆದುಕೊಂಡು ವರ್ತೂರು ಮತ್ತು ವೈಟ್‌ಫೀಲ್ಡ್ ಕಡೆಗೆ ಹೋಗುವ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.
* ಮಾರತ್ತಹಳ್ಳಿ ಕಡೆಯಿಂದ ಬರುವ ವಾಹನಗಳು ದೊಡ್ಡನೆಕ್ಕುಂದಿ ಜಂಕ್ಷನ್‌ನಲ್ಲಿ ಯು–ತಿರುವು ಪಡೆಯುವುದನ್ನು ನಿರ್ಬಂಧಿಸಲಾಗಿದೆ.
ಸಂಚಾರಕ್ಕೆ ಪರ್ಯಾಯ ಮಾರ್ಗ:
* ದೇವರಬೀಸನಹಳ್ಳಿ, ಕಾಡುಬೀಸನಹಳ್ಳಿ ಕಡೆಯಿಂದ ವರ್ತೂರು ಮತ್ತು ಕುಂದಲಹಳ್ಳಿ ಕಡೆಗೆ ಸಂಚರಿಸುವ ವಾಹನಗಳು ಹೊರವರ್ತುಲ ರಸ್ತೆಯ ಮೂಲಕ ಸಂಚರಿಸಿ, ಕಾರ್ತಿಕ್ ನಗರ ಜಂಕ್ಷನ್ ಬಳಿ ಯು–ತಿರುವು ಪಡೆದುಕೊಳ್ಳಬೇಕು. ಕಲಾಮಂದಿರ ಸರ್ವಿಸ್ ರಸ್ತೆಯ ಮೂಲಕ ವರ್ತೂರು ಮುಖ್ಯರಸ್ತೆ ತಲುಪಿ, ವೈಟ್‌ಫೀಲ್ಡ್ ಮತ್ತು ವರ್ತೂರು ಕಡೆಗೆ ಸಂಚರಿಸಬಹುದು.
* ಮಾರತ್ತಹಳ್ಳಿ, ಕುಂದಲಹಳ್ಳಿ ಕಡೆಯಿಂದ ಕೆ.ಆರ್. ಪುರಕ್ಕೆ ಹೋಗುವ ವಾಹನಗಳು ದೊಡ್ಡನೆಕ್ಕುಂದಿ ಮುಖ್ಯರಸ್ತೆಯ ಜಂಕ್ಷನ್‌ನಲ್ಲಿ ಬಲಕ್ಕೆ ತಿರುವು ಪಡೆದು ದೊಡ್ಡನೆಕ್ಕುಂದಿ ಮುಖ್ಯರಸ್ತೆಯ ಮೂಲಕ ಕಾರ್ತಿಕ್ ನಗರ ಜಂಕ್ಷನ್ ಕಡೆಗೆ ಸಾಗಿ ಹೊರ ವರ್ತುಲ ರಸ್ತೆಯಲ್ಲಿ ಸಾಗಬಹುದು ಎಂದು ಸಂಚಾರ ಪೂರ್ವ ವಿಭಾಗದ ಡಿಸಿಪಿ ಸಾಹಿಲ್ ಬಾಗ್ಲಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.