ನೆಲಮಂಗಲ: ಟಿ.ಬೇಗೂರು ಬಳಿ ಖಾಸಗಿ ಬಸ್, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ, ಪಟ್ಟಣದ ಸುಭಾಷ್‌ನಗರ ನಿವಾಸಿ ಲಕ್ಷ್ಮಿಕಾಂತ್(68) ಅವರು ಮೃತಪಟ್ಟಿದ್ದಾರೆ.
ಲಕ್ಷ್ಮಿಕಾಂತ್ ಅವರು ತಾಲ್ಲೂಕಿನ ಮಿಣ್ಣಾಪುರದಲ್ಲಿ ಇರುವ ತಮ್ಮ ಜಮೀನಿಗೆ ಸೋಮವಾರ ಬೆಳಿಗ್ಗೆ ಹೋಗುತಿದ್ದರು. ರಾಷ್ಟ್ರೀಯ ಹೆದ್ದಾರಿ 48ರ ಟಿ.ಬೇಗೂರು ಬಳಿ ಖಾಸಗಿ ಕಂಪನಿ ಬಸ್ ಹಿಂದಿನಿಂದ ಗುದ್ದಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಸಂಚಾರ ಪೊಲೀಸರು ಹೇಳಿದರು.
ನೆಲಮಂಗಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.