ADVERTISEMENT

ಬೆಂಗಳೂರು: ನೂಪುರ್ ಪರ್ಫಾರ್ಮಿಂಗ್ ವತಿಯಿಂದ ಆಗಸ್ಟ್ 17ಕ್ಕೆ ‘ನೃತ್ಯ ಸಂಧ್ಯಾ’

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2024, 14:40 IST
Last Updated 12 ಆಗಸ್ಟ್ 2024, 14:40 IST
   

ಬೆಂಗಳೂರು: ನೂಪುರ್ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್‌ ವತಿಯಿಂದ ಆಗಸ್ಟ್ 17ರ ಸಂಜೆ 5 ಗಂಟೆಗೆ ಕೋರಮಂಗಲದ ಮೆದಾಯಿ ಆಡಿಟೋರಿಯಂನಲ್ಲಿ ‘ನೃತ್ಯ ಸಂಧ್ಯಾ’ ಕಾರ್ಯಕ್ರಮ ಆಯೋಜಿಸಲಾಗಿದೆ. 

ಕಥಕ್ ನೃತ್ಯಪಟು ಮಹೇಶ್‌ ಹಾಗೂ ಹರಿ ಮತ್ತು ಚೇತನ ಅವರಿಂದ ಕಥಕ್ ಪ್ರದರ್ಶನ ನಡೆಯಲಿದೆ. ಸತ್ಯನಾರಾಯಣ ರಾಜು ಅವರು ‘ರಾಮ ಕಥಾ’ ಪ್ರಸ್ತುತಪಡಿಸಲಿದ್ದಾರೆ. 

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಅಧ್ಯಕ್ಷೆ ಶುಭ ಧನಂಜಯ್ ಭಾಗವಹಿಸಲಿದ್ದಾರೆ. 

ADVERTISEMENT

‘ಬುಕ್ ಮೈಶೋ’ನಲ್ಲಿ ಕಾರ್ಯಕ್ರಮದ ಟಿಕೆಟ್‌ ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ– 8584076671 ಸಂರ್ಪಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.