ADVERTISEMENT

ರಸ್ತೆ ಗುಂಡಿ ವಿರುದ್ಧ ‘ಬಿಬಿಎಂಪಿ’ ಹೋರಾಟ!

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 16:07 IST
Last Updated 29 ಸೆಪ್ಟೆಂಬರ್ 2025, 16:07 IST
ನಗರದ ರಸ್ತೆ ಗುಂಡಿ ವಿರುದ್ಧ ಮಾಸ್ಕ್‌ ಧರಿಸಿ ನಾಗರಿಕರು ಪ್ರತಿಭಟನೆ ನಡೆಸಿದರು
ನಗರದ ರಸ್ತೆ ಗುಂಡಿ ವಿರುದ್ಧ ಮಾಸ್ಕ್‌ ಧರಿಸಿ ನಾಗರಿಕರು ಪ್ರತಿಭಟನೆ ನಡೆಸಿದರು   

ಬೆಂಗಳೂರು: ‘ನಗರದ ಮೂಲ ಸೌಕರ್ಯ ಅಭಿವೃದ್ಧಿಯಲ್ಲಿ ವಿಫಲವಾದ ರಾಜ್ಯ ಸರ್ಕಾರದ ವಿರುದ್ಧ ಬೆಂಗಳೂರು ಬ್ಲ್ಯಾಕ್‌ ಮಾಸ್ಕ್‌ ಪ್ರೊಟೆಸ್ಟ್‌ (ಬಿಬಿಎಂಪಿ) ಎಂಬ ಘೋಷಣೆಯೊಂದಿಗೆ ಮಾಸ್ಕ್‌ ಧರಿಸಿಕೊಂಡು ರಸ್ತೆ ಗುಂಡಿಗಳ ಬಳಿ ಪ್ರತಿಭಟನೆ ನಡೆಸಲಾಗುವುದು’ ಎಂದು  ಉದ್ಯಮಿ ಅನಿಲ್‌ ಶೆಟ್ಟಿ ತಿಳಿಸಿದ್ದಾರೆ.

‘ಪ್ರತಿಭಟನೆ ಮಾಡುವ ನಾಗರಿಕರು ಸರ್ಕಾರದ ಮತ್ತು ಸ್ಥಳೀಯ ರಾಜಕಾರಣಿಗಳ ಕೆಂಗಣ್ಣಿಗೆ ಗುರಿಯಾಗುವುದನ್ನು ತಪ್ಪಿಸ್ಸಿಕೊಳ್ಳಲು ಕಪ್ಪು ಮಾಸ್ಕ್‌ ಧರಿಸಲಾಗುವುದು. ಈಗಾಗಲೇ ಕೆಲವು ಕಡೆಗಳಲ್ಲಿ ಪ್ರತಿಭಟನೆ ನಡೆಸಲಾಗಿದೆ. ಇದರ ಫೋಟೊ ಮತ್ತು ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲಾಗುವುದು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT