ADVERTISEMENT

ನಾಳೆಯಿಂದ ಪುಸ್ತಕೋತ್ಸವ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2018, 19:24 IST
Last Updated 13 ಅಕ್ಟೋಬರ್ 2018, 19:24 IST

ಬೆಂಗಳೂರು:ಬೆಂಗಳೂರು ಪುಸ್ತಕ ಪ್ರಕಾಶಕರು ಮತ್ತು ಮಾರಾಟಗಾರರ ಸಂಘ ಇದೇ 15ರಿಂದ 21ರವರೆಗೆ ಬೆಂಗಳೂರು ಪುಸ್ತಕೋತ್ಸವವನ್ನು ಆಯೋಜಿಸಿದೆ.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಎ.ಎನ್.ರಾಮಚಂದ್ರಮಾತನಾಡಿ, ‘ಅರಮನೆ ಮೈದಾನದಲ್ಲಿ ಪುಸ್ತಕ ಮೇಳ ನಡೆಯಲಿದೆ. 65 ಕನ್ನಡ, 170ಕ್ಕೂ ಹೆಚ್ಚು ಇಂಗ್ಲಿಷ್‌ ಹಾಗೂ 30 ಇತರ ಭಾಷೆಯ ಪುಸ್ತಕ ಮಳಿಗೆಗಳು ತೆರೆಯಲಿದ್ದು, 10 ಲಕ್ಷಕ್ಕೂ ಅಧಿಕ ಪುಸ್ತಕಗಳ ಪ್ರದರ್ಶನ ನಡೆಯಲಿದೆ’ ಎಂದು ತಿಳಿಸಿದರು.

‘ಕನ್ನಡ ಪುಸ್ತಕ ಮಳಿಗೆಗಳಲ್ಲಿ ರಿಯಾಯತಿ ಸಹ ಇರಲಿದ್ದು, ವಿವಿಧ ಭಾಷೆಯ ಪುಸ್ತಕಗಳು ಒಂದೇ ಸೂರಿನಡಿ ದೊರೆಯಲಿವೆ. ನಟ ರಮೇಶ್ ಅರವಿಂದ್, ಈ ಬಾರಿಯೂ ಪುಸ್ತಕೋತ್ಸವದ ರಾಯಭಾರಿಯಾಗಲಿದ್ದಾರೆ. ಗೀತ ಗಾಯನ, ಕವಿಗೋಷ್ಠಿ ಸೇರಿದಂತೆ ವಿವಿಧ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಅಂದು ಸಂಜೆ 4ಕ್ಕೆಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಮೇಳ ಉದ್ಘಾಟಿಸಲಿದ್ದು, ಸಾಹಿತಿಚಂದ್ರಶೇಖರ ಕಂಬಾರ ಅಧ್ಯಕ್ಷತೆವಹಿಸಲಿದ್ದಾರೆ.ಅತಿಥಿಗಳಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾಭೂಪತಿ, ಕನ್ನಡ ಸಾಹಿತ್ಯ ಪರಿಷತ್ತಿನಅಧ್ಯಕ್ಷ ಮನು ಬಳಿಗಾರ್ ಪಾಲ್ಗೊಳ್ಳಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.