ಬೆಂಗಳೂರು ರಸ್ತೆಗಳ ದುಸ್ಥಿತಿ ಬಗ್ಗೆ ಬಾಲಕಿಯರ Video: ಡಿಕೆಶಿ ಮೇಲೆ BJP ಕಿಡಿ
ಬೆಂಗಳೂರು: ಬೆಂಗಳೂರು ನಗರದ ರಸ್ತೆಯ ದುಸ್ಥಿತಿ, ರಸ್ತೆ ಗುಂಡಿಗಳ ಹಾವಳಿ ಹಾಗೂ ಪಾದಚಾರಿ ಮಾರ್ಗಗಳ ಅವ್ಯವಸ್ಥೆ ಬಗ್ಗೆ ಹಲವರು ಆಗಾಗ ದೂರು ನೀಡಿ ಗಮನ ಸೆಳೆಯುತ್ತಾರೆ.
ಇದೀಗ ಶಾಲಾ ಮಕ್ಕಳೇ ಬಸ್‌ನಲ್ಲಿ ಕೂತು ಸೆಲ್ಪೀ ವಿಡಿಯೊ ಮಾಡಿ ‘ಅಯ್ಯೋ ಬೆಂಗಳೂರು ರಸ್ತೆ, ಟ್ರಾಫಿಕ್ ಜಾಮ್ ಬಗ್ಗೆ ತುಂಬಾ ಭಯ ಆಗುತ್ತೆ’ ಎನ್ನುವಾಗಲೇ ರಸ್ತೆ ಗುಂಡಿ ಸಮಸ್ಯೆಗೆ ಸಿಲುಕಿ ಗಮನ ಸೆಳೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ಹರಿದಾಡುತ್ತಿದೆ. ಈ ವಿಡಿಯೊವನ್ನು ಬಿಜೆಪಿ ಎಕ್ಸ್‌ನಲ್ಲಿ ಹಂಚಿಕೊಂಡು ಡಿ.ಕೆ ಶಿವಕುಮಾರ್ ಹಾಗೂ ರಾಹುಲ್ ಗಾಂಧಿ ಅವರಿಗೆ ನೀವು ಹೇಳಿರುವ ಬ್ರ್ಯಾಂಡ್ ಬೆಂಗಳೂರು ಮಾದರಿ ಇದೇನಾ? ಎಂದು ಪ್ರಶ್ನಿಸಿದ್ದಾರೆ.
ಬಾಲಕಿಯರು, ರಸ್ತೆ ಗುಂಡಿ, ಟ್ರಾಫಿಕ್‌ನಿಂದ ಶಾಲೆಗೆ ಸರಿಯಾಗಿ ಹೋಗಲು ಆಗುತ್ತಿಲ್ಲ, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾಗಲು ಆಗುತ್ತಿಲ್ಲ ಎಂದು ಬಾಲಕಿಯರು ವಿಡಿಯೊ ಮಾಡಿದ್ದಾರೆ. ಆದರೆ ಬಾಲಕಿಯರು ಯಾವ ಶಾಲೆಯವರು ಎಂಬುದು ಬಹಿರಂಗವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.