ಬೆಂಗಳೂರು: ಜಯನಗರ (ಬೆಂಗಳೂರು ದಕ್ಷಿಣ) ಪ್ರಾದೇಶಿಕ ಸಾರಿಗೆ ಕಚೇರಿಯು ಉತ್ತರಹಳ್ಳಿ ಹೋಬಳಿಯ ಜೆ.ಪಿ.ನಗರ 9ನೇ ಹಂತದಲ್ಲಿರುವ ಅಂಜನಾಪುರದಲ್ಲಿ ನಿರ್ಮಾಣಗೊಂಡಿರುವ ನೂತನ ಕಟ್ಟಡದಲ್ಲಿ ಶುಕ್ರವಾರ ಅಧಿಕೃತವಾಗಿ ಆರಂಭಗೊಂಡಿದೆ.
ಅಂಜನಾಪುರದಲ್ಲಿ ಮೂರು ಅಂತಸ್ತಿನ ಈ ಕಟ್ಟಡವು 38,793 ಚದರಡಿ ವಿಸ್ತೀರ್ಣ ಹೊಂದಿದ್ದು, ₹11.25 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿತ್ತು. ಹೊಸ ಕಟ್ಟಡವನ್ನು ಒಂದು ತಿಂಗಳ ಹಿಂದೆಯೇ ಉದ್ಘಾಟಿಸಲಾಗಿತ್ತು. ಆ ನಂತರ ಕಡತ ಸಹಿತ ವಿವಿಧ ದಾಖಲೆಗಳನ್ನು ಸ್ಥಳಾಂತರಿಸುವ ಕಾರ್ಯಗಳು ನಡೆದಿದ್ದವು.
ಜಯನಗರ ವ್ಯಾಪ್ತಿಗೆ ಸಂಬಂಧಿಸಿದಂತೆ ಸಾರಿಗೆ ಇಲಾಖೆಯ ಎಲ್ಲ ಕೆಲಸಗಳು ಶುಕ್ರವಾರದಿಂದ ಅಂಜನಾಪುರದಲ್ಲಿಯೇ ನಡೆಯುತ್ತಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.