ADVERTISEMENT

ಬೆಂಗಳೂರು: ಶಿಲ್ಪ ಸಮಾಗಮ ಮೇಳ ಆರಂಭ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 20:30 IST
Last Updated 8 ಸೆಪ್ಟೆಂಬರ್ 2025, 20:30 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಟಿಯುಎಲ್‌ಐಪಿ ಸಹಯೋಗದೊಂದಿಗೆ ‘ಶಿಲ್ಪ ಸಮಾಗಮ ಮೇಳ–2025’ ಆರಂಭಿಸಿದ್ದು, ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಇದೇ 14ರವರೆಗೆ ನಡೆಯಲಿದೆ.

ವಿವಿಧ ರಾಜ್ಯಗಳ ಕುಶಲಕರ್ಮಿಗಳು ತಯಾರಿಸಿದ ಗೃಹೋಪಯೋಗಿ, ಅಲಂಕಾರಿಕ ಮತ್ತು ಇತರೆ ದೇಶೀಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಇದೆ. ಕರಕುಶಲ ವಸ್ತುಗಳ 75 ಮಳಿಗೆಗಳನ್ನು ತೆರೆಯಲಾಗಿದೆ. ಮರದ ಕಲಾಕೃತಿಗಳು, ಬೆತ್ತ, ಬಿದುರಿನ ಉತ್ಪನ್ನಗಳು, ಕುಂಬಾರಿಕೆ, ಜವಳಿ
ಉತ್ಪನ್ನಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ. ಮೇಳದಲ್ಲಿ ಸಂಜೆ ಜಾನಪದ
ನೃತ್ಯಗಳು, ಸಾಂಪ್ರದಾಯಿಕ ಸಂಗೀತ ಮತ್ತು ಕಥೆ ಹೇಳುವ ಕಾರ್ಯಕ್ರಮಗಳು ಇರುತ್ತವೆ.

ADVERTISEMENT

ಕೇಂದ್ರ ಸಾಮಾಜಿಕ ಮತ್ತು ಸಬಲೀಕರಣ ಸಚಿವ ವೀರೇಂದ್ರ ಪ್ರಸಾದ್ ಅವರು ಮೇಳ ಉದ್ಘಾಟಿಸಿದರು. ರಾಜ್ಯ ಖಾತೆ ಸಚಿವ ರಾಮದಾಸ್ ಅಠಾವಳೆ, ಸಂಸತ್ ಸದಸ್ಯ ಪಿ.ಸಿ.ಮೋಹನ್ ಮತ್ತು ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.