
ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್‌ಆರ್‌ಪಿ) ಕಾರಿಡಾರ್–2ರ ಕಾಮಗಾರಿಯನ್ನು ಕೆ–ರೈಡ್ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಸಿಂಗ್ ಪರಿಶೀಲನೆ ನಡೆಸಿದರು.
ಮಲ್ಲಿಗೆ ಮಾರ್ಗವಾಗಿರುವ ಈ ಕಾರಿಡಾರ್‌ನಲ್ಲಿ ಮತ್ತಿಕೆರೆ–ಹೆಬ್ಬಾಳ ನಡುವಿನ ಎತ್ತರಿಸಿದ ಮಾರ್ಗದಲ್ಲಿ ಯೋಜನಾ ತಂಡ, ಅಧಿಕಾರಿಗಳೊಂದಿಗೆ ತೆರಳಿ ಅವರು ವೀಕ್ಷಿಸಿದರು. ಕಾರಿಡಾರ್–2 ಒಟ್ಟು 25.35 ಕಿ.ಮೀ. ಉದ್ದವಿದ್ದು, ಅದರಲ್ಲಿ 4.27 ಕಿ.ಮೀ. ಎತ್ತರಿಸಿದ ಮಾರ್ಗವು ಜನನಿಬಿಡ ಪ್ರದೇಶದಲ್ಲಿದೆ. ಸ್ಥಳಾವಕಾಶ ಕೊರತೆಯನ್ನು ಪರಿಹರಿಸಲು ಮತ್ತಿಕೆರೆಯಿಂದ ಲೊಟ್ಟೆಗೊಲ್ಲಹಳ್ಳಿ ನಡುವೆ 1.28 ಕಿ.ಮೀ. ಡಬಲ್ ಡೆಕರ್ ನಿರ್ಮಾಣವಾಗಲಿದೆ ಎಂದು ಅಧಿಕಾರಿಗಳು ವಿವರಿಸಿದರು.
ಯುಟಿಲಿಟಿಗಳಾದ ಒಳಚರಂಡಿ, ನೀರಿನ ಪೈಪ್‌ಲೈನ್‌ಗಳನ್ನು ಬದಲಾಯಿಸುವುದು, ತೆಗೆದುಹಾಕುವುದು, ತಿರುಗಿಸುವುದು ಮುಂತಾದ ಕಾರ್ಯಗಳಿಗೆ ಒಳಚರಂಡಿ ಮಂಡಳಿಯೊಂದಿಗೆ ಸಮನ್ವಯ ಸಾಧಿಸಿ ಕಾಮಗಾರಿಯನ್ನು ಸಕಾಲದಲ್ಲಿ ಮುಗಿಸಬೇಕು ಎಂದು ಲಕ್ಷ್ಮಣ್ ಸಿಂಗ್ ಸೂಚಿಸಿದರು.
ಉಪನಗರ ರೈಲು ಯೋಜನೆ ಹಾದು ಹೋಗುವ ಮಾರ್ಗದಲ್ಲಿ ಒತ್ತುವರಿಯಾಗಿರುವ ನೈರುತ್ಯ ರೈಲ್ವೆಯ ಜಮೀನು ತೆರವುಗೊಳಿಸುವ ಪ್ರಕ್ರಿಯೆಯನ್ನು ಪರಿಶೀಲಿಸಿದರು.
Highlights -
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.