ಬೆಂಗಳೂರು: ಪ್ರಯಾಣಿಕರನ್ನು ಕರೆದೊಯ್ಯುವ ಬಸ್‌ಗಳಲ್ಲಿ ಅಧಿಕ ಲಗೇಜ್‌ಗಳನ್ನು ಒಯ್ಯುತ್ತಿರುವುದನ್ನು ಪತ್ತೆ ಹಚ್ಚಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಬಸ್ ಮಾಲೀಕರಿಗೆ ದಂಡ ವಿಧಿಸಿದ್ದಾರೆ.
ನಗರದ ಹತ್ತು ಪ್ರಾದೇಶಿಕ ಸಾರಿಗೆ ಕಚೇರಿಗಳ ವ್ಯಾಪ್ತಿಯಲ್ಲಿ ಮೂರು ದಿನ ನಡೆದ ಕಾರ್ಯಾಚರಣೆಯಲ್ಲಿ 600 ಬಸ್‌ಗಳಲ್ಲಿ ಅಧಿಕ ಲಗೇಜ್ ಸಾಗಾಟ ಮಾಡುವುದು ಪತ್ತೆಯಾಗಿದೆ. ಲಗೇಜ್ ಇಳಿಸಿ, ಪ್ರಯಾಣಿಕರನ್ನು ಮತ್ತು ಅವರ ಬ್ಯಾಗ್‌ಗಳನ್ನು ಮಾತ್ರ ಒಯ್ಯಲು ಅವಕಾಶ ಮಾಡಿಕೊಟ್ಟಿದ್ದಾರೆ
ಬಸ್‌ಗಳಲ್ಲಿ ಪಟಾಕಿ ಸಾಗಾಟ ಮಾಡುವಂತಿಲ್ಲ. ಈ ಬಗ್ಗೆಯೂ ತಪಾಸಣೆ ನಡೆಸಲಾಯಿತು. ಆದರೆ, ಪಟಾಕಿಗಳು ಪತ್ತೆಯಾಗಿಲ್ಲ ಎಂದು ಬೆಂಗಳೂರು ಕೇಂದ್ರ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಲ್. ದೀಪಕ್ ತಿಳಿಸಿದ್ದಾರೆ.
ಬಸ್‌ಗಳಲ್ಲದೇ ಗೂಡ್ಸ್ ವಾಹನಗಳನ್ನು ಕೂಡ ತಪಾಸಣೆ ನಡೆಸಲಾಗಿದೆ. ನಿಗದಿ ಪಡಿಸಿದ್ದಕ್ಕಿಂತ ಅಧಿಕ ಸಾಗಾಟ ಮಾಡುತ್ತಿದ್ದ ಸುಮಾರು 500 ವಾಹನಗಳಿಗೆ ದಂಡ ವಿಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.