ADVERTISEMENT

ಬೆಂಗಳೂರು ವಿ.ವಿ: ಹೊರಗುತ್ತಿಗೆ ನೌಕರರ ವೇತನ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2022, 19:29 IST
Last Updated 20 ಏಪ್ರಿಲ್ 2022, 19:29 IST
   

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರ ವೇತನ ಹೆಚ್ಚಿಸಲು ಸಿಂಡಿಕೇಟ್‌ ಸಭೆಯಲ್ಲಿ ನಿರ್ಧರಿಸಲಾಗಿದೆ.

ಪ್ರಸ್ತುತ ಪಡೆಯುತ್ತಿರುವ ವೇತನಕ್ಕೆ ₹4,000 ಹೆಚ್ಚಿಗೆ ನೀಡಲು ಮತ್ತು ಮುಂದಿನ ಆರು ತಿಂಗಳ ಅವಧಿಗೆ ಮುಂದುವರಿಸಲು ನಿರ್ಧರಿಸಲಾಗಿದೆ. ಏ.16ರಿಂದ ಈ ನಿರ್ಧಾರಗಳು ಜಾರಿಯಾಗಿವೆ.

ಕುಲಪತಿ ಪ್ರೊ. ಕೆ.ಆರ್‌. ವೇಣುಗೋಪಾಲ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈನಿರ್ಧಾರ ಕೈಗೊಳ್ಳಲಾಗಿದ್ದು,
496 ನೌಕರರಿಗೆ ಈ ಸೌಲಭ್ಯಗಳು ಅನ್ವಯವಾಗಲಿವೆ. ಇವರ ಅವಧಿ ಏ.12ರಂದು ಮುಕ್ತಾಯಗೊಂಡಿತ್ತು. ಇಲ್ಲಿಯವರೆಗೆ ಇವರಿಗೆ ₹17 ಸಾವಿರ ವೇತನ ನೀಡಲಾಗುತ್ತಿತ್ತು. ಇನ್ನು ಮುಂದೆ ₹21 ಸಾವಿರ ದೊರೆಯಲಿದೆ.

ADVERTISEMENT

ಬೆಂಗಳೂರು ವಿಶ್ವವಿದ್ಯಾಲಯದ ಹೊಸ ಕುಲಪತಿಯ ಆಯ್ಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರಚಿಸುವ ಶೋಧನಾ ಸಮಿತಿಗೆ ನೃಪತುಂಗ ವಿಶ್ವವಿದ್ಯಾಲಯದ ಪ್ರೊ. ಶ್ರೀನಿವಾಸ್‌ ಎಸ್. ಬಾಲಿ ಅವರನ್ನು ನಾಮನಿರ್ದೇಶನ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.

2021–22ನೇ ಮತ್ತು 2022–23ನೇ ಸಾಲಿನ ಆಯವ್ಯಯ ಅಂದಾಜುಗಳ ವಿವರಗಳನ್ನು ಮಂಡಿಸಿದ ಪ್ರಭಾರ ಹಣಕಾಸು ಅಧಿಕಾರಿ ಆರ್‌. ಜಯಲಕ್ಷ್ಮಿ ಅವರು, 2022–23ನೇ ಸಾಲಿನಲ್ಲಿ ₹55.28 ಕೋಟಿ ಕೊರತೆಯಾಗಲಿದೆ ಎಂದು ವಿವರಿಸಿದರು.

ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ 99 ದಿನಗೂಲಿ ನೌಕರರನ್ನು ಕಾಯಂಗೊಳಿಸಲು ಸರ್ಕಾರದ ಅನುಮೋದನೆ ಕೋರಿ
ಪತ್ರ ಬರೆಯಲು ಸಭೆಯಲ್ಲಿನಿರ್ಧರಿಸಲಾಯಿತು.

ಯುವಿಸಿಇಯ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದ ನಿರ್ಮಾಣಕ್ಕೆ ವೆಚ್ಚವಾಗುವ₹85 ಕೋಟಿಯನ್ನು ಬೆಂಗಳೂರು
ವಿಶ್ವವಿದ್ಯಾಲಯ ಆಂತರಿಕ ಮೂಲಗಳಿಂದ ಭರಿಸಲು ಸಿಂಡಿಕೇಟ್‌ ಸಭೆ ವಿಸ್ತೃತ ಚರ್ಚೆಯ ನಂತರಒಪ್ಪಿಗೆ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.