ADVERTISEMENT

ಬೆಂಗಳೂರು ವಿಶ್ವವಿದ್ಯಾಲಯ ಆನ್‌ಲೈನ್‌ನಲ್ಲಿ ಸೀಟು ಹಂಚಿಕೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2019, 20:30 IST
Last Updated 26 ಆಗಸ್ಟ್ 2019, 20:30 IST
   

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ 2019-20 ಸಾಲಿನ ಸ್ನಾತಕೋತ್ತರ ಪ್ರವೇಶ ಪ್ರಕ್ರಿಯೆಗೆಸಂಬಂಧಿಸಿದಂತೆ, ಈ ಬಾರಿ ಎಂಕಾಂ, ಎಂಎಫ್‌ಎ, ಎಂಟಿಎ, ಎಂಟಿಟಿಎಂ ಮತ್ತು ಎಂಐಬಿ ಕೋರ್ಸುಗಳಿಗೆ ಗಣಕೀಕೃತ ತಂತ್ರಜ್ಞಾನದಿಂದ, ವಿದ್ಯಾರ್ಥಿಗಳ ಇಚ್ಛೆಗೆಅನುಗುಣವಾಗಿ, ಸೀಟು ಹಂಚಿಕೆಯನ್ನು ಆನ್‌ಲೈನ್‌ನಲ್ಲಿ ಮಾಡಲಾಗುತ್ತಿದೆ.

ಇದೇ 27ರಂದು ಈ ಪ್ರಕ್ರಿಯೆ ಕೊನೆಗೊಳ್ಳಲಿದ್ದು, ಮೂಲ ದಾಖಲೆಗಳ ಪರಿಶೀಲನೆಯನ್ನು ಜ್ಞಾನಭಾರತಿಯ, ವೆಂಕಟಗಿರಿಗೌಡ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಮೂಲ ದಾಖಲೆ ಪರಿಶೀಲನೆಗೆ ಗೈರಾದ ವಿದ್ಯಾರ್ಥಿಗಳನ್ನು ಸೀಟು ಹಂಚಿಕೆ ಪ್ರಕ್ರಿಯೆಯಿಂದ ಕೈಬಿಡಲಾಗುವುದು. ಹೆಚ್ಚಿನ ಮಾಹಿತಿಯನ್ನು www.bangaloreuniversity.ac.in ನಿಂದ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT