ADVERTISEMENT

ಬೆಂಗಳೂರು: ಜಲಮಂಡಳಿಯ ನೀಲಿಪಡೆ ತಪಾಸಣೆ ಚುರುಕು;ಒಂದೇ ದಿನ 70 ಅಕ್ರಮ ಸಂಪರ್ಕ ಕಡಿತ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 14:19 IST
Last Updated 22 ಡಿಸೆಂಬರ್ 2025, 14:19 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಬೆಂಗಳೂರು ಜಲಮಂಡಳಿ ಆರಂಭಿಸಿರುವ ನೀಲಿಪಡೆ ಒಂದೇ ತಿಂಗಳಲ್ಲಿ 4,000ಕ್ಕೂ ಹೆಚ್ಚಿನ ಕಡೆ ತಪಾಸಣೆ ನಡೆಸಿ ನೂರಾರು ಅಕ್ರಮ ಸಂಪರ್ಕಗಳನ್ನು ಪತ್ತೆ ಹಚ್ಚಿದೆ.

ಕಳೆದ ತಿಂಗಳ 18ರಂದು ಜಲಮಂಡಳಿಯ ವಿಶೇಷ ಕಾರ್ಯಪಡೆ ಅಸ್ತಿತ್ವಕ್ಕೆ ಬಂದಿದೆ. ಡಿ.20 ರಂದು ನೀಲಿಪಡೆಯ ತಂಡಗಳು ನಗರದ ನಾಲ್ಕು ವಲಯಗಳಲ್ಲಿ 237 ಕಟ್ಟಡಗಳ ಪರಿಶೀಲನೆ ನಡೆಸಿ, ಅಕ್ರಮವಾಗಿ ನೀರು ಬಳಸುತ್ತಿದ್ದ 70 ಸಂಪರ್ಕಗಳನ್ನು ಸ್ಥಳದಲ್ಲೇ ಕಡಿತಗೊಳಿಸಲಾಗಿದೆ.

ADVERTISEMENT

ದಕ್ಷಿಣ ವಲಯದಲ್ಲಿ ಅತಿ ಹೆಚ್ಚು ಕಾರ್ಯಾಚರಣೆ ನಡೆದಿದ್ದು, 61 ಕಟ್ಟಡಗಳ ತಪಾಸಣೆ ನಡೆಸಿ 33 ಅಕ್ರಮ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ. ಪೂರ್ವ ವಲಯದಲ್ಲಿ 18, ಪಶ್ಚಿಮ ವಲಯದಲ್ಲಿ 15 ಹಾಗೂ ಉತ್ತರ ವಲಯದಲ್ಲಿ 4 ಸಂಪರ್ಕ ಕಡಿತ ಮಾಡಲಾಗಿದೆ.

‘ನೀರಿನ ಕಳ್ಳತನ ಮತ್ತು ಅನಧಿಕೃತ ಸಂಪರ್ಕಗಳಿಂದ ಮಂಡಳಿಗೆ ಆಗುತ್ತಿರುವ ಆದಾಯ ಸೋರಿಕೆ ತಡೆಗಟ್ಟಲು ನೀಲಿಪಡೆ ರಚಿಸಲಾಗಿದೆ. ಅಕ್ರಮ ಸಂಪರ್ಕ ಹೊಂದಿರುವವರು ಕೂಡಲೇ ಸಕ್ರಮಗೊಳಿಸಿಕೊಳ್ಳಬೇಕು. ಇಲ್ಲದಿದ್ದರೆ ದಂಡ ಮತ್ತು ಕಾನೂನು ಕ್ರಮ ಎದುರಿಸಬೇಕಾಗುತ್ತದೆ’ ಎಂದು ಮಂಡಳಿ ಅಧ್ಯಕ್ಷ ರಾಮಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.