ADVERTISEMENT

ಬೆಸ್ಕಾಂ: ನೂತನ ಉಪವಿಭಾಗ ಕಚೇರಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 14:27 IST
Last Updated 30 ಜೂನ್ 2025, 14:27 IST
<div class="paragraphs"><p>ಬೆಸ್ಕಾಂ</p></div>

ಬೆಸ್ಕಾಂ

   

ಬೆಂಗಳೂರು: ಕೋರಮಂಗಲ ವಿಭಾಗದ ಬೆಸ್ಕಾಂನ ಎಸ್-16 ಮಡಿವಾಳ ಉಪ ವಿಭಾಗ ಕಚೇರಿಯ ನೂತನ ಕಟ್ಟಡವನ್ನು ಇಂಧನ ಸಚಿವ ಕೆ.ಜೆ.ಜಾರ್ಜ್ ಸೋಮವಾರ ಉದ್ಘಾಟಿಸಿದರು.

ಬಿಟಿಎಂ ಬಡಾಣೆಯಲ್ಲಿ ₹3.17 ಕೋಟಿ ವೆಚ್ಚದಲ್ಲಿ ಉಪವಿಭಾಗ ಕಚೇರಿಯ ನೂತನ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. 7431.50 ಚದರ ಅಡಿ ಅಳತೆಯಲ್ಲಿ ನಿರ್ಮಿಸಿರುವ ಈ ಕಟ್ಟಡದಲ್ಲಿ ಮೂರು ಅಂತಸ್ತುಗಳಿವೆ.

ADVERTISEMENT

ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್, ‘ಬಿಟಿಎಂ ಲೇಔಟ್‌ ಉಪ ವಿಭಾಗದಲ್ಲಿ 83,000ಕ್ಕೂ ಹೆಚ್ಚಿನ ಸಂಪರ್ಕಗಳಿವೆ. ಸಾರ್ವಜನಿಕರಿಗೆ ನೂತನ ಉಪವಿಭಾಗ ಕೇಂದ್ರವು ಬೆಸ್ಕಾಂನ ಹತ್ತು ಹಲವು ಸೇವೆಗಳನ್ನು ತ್ವರಿತವಾಗಿ ಒದಗಿಸಲು ನೆರವಾಗಲಿದೆ‘ ಎಂದು ಹೇಳಿದರು.

‘ಬೆಸ್ಕಾಂ ವಿದ್ಯುತ್ ಪೂರೈಕೆ ಜತೆಗೆ ಸ್ವಂತ ಮೂಲಸೌಕರ್ಯ ಕಲ್ಪಿಸಿಕೊಳ್ಳುವುದಕ್ಕೂ ಒತ್ತು ನೀಡುತ್ತಿದೆ. ಇದರಿಂದ ಭವಿಷ್ಯದಲ್ಲಿ ಆರ್ಥಿಕವಾಗಿಯೂ ಹೊರೆ ತಗ್ಗಲಿದೆ. ಎಲ್ಲಾ ಮೂಲ ಸೌಕರ್ಯಗಳಿರುವುದರಿಂದ ಸಾರ್ವಜನಿಕರಿಗೆ ಇನ್ನಷ್ಟು ತ್ವರಿತವಾಗಿ ಸೇವೆ ಲಭ್ಯವಾಗಲಿದೆ‘ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎನ್. ಶಿವಶಂಕರ್ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.