ಮುಳಬಾಗಿಲು: ಸ್ನೇಹಿತರ ಜೊತೆ ಬೆಟ್ಟಿಂಗ್ ಕಟ್ಟಿ ನೀರು ಬೆರಸದೆ ಐದಾರು ಬಾಟಲ್ ಮದ್ಯ ಸೇವಿಸಿ ಅಸ್ವಸ್ಥನಾದ ತಾಲ್ಲೂಕಿನ ಪೂಜಾರಹಳ್ಳಿ ಯುವಕ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.
ತಾಲ್ಲೂಕಿನ ಪೂಜಾರಹಳ್ಳಿ ಗ್ರಾಮದ ಕಾರ್ತೀಕ್ (21) ಮೃತ ಯುವಕ. ನೀರು ಬೆರಸದೆ ಮದ್ಯ ಸೇವಿಸುವುದಾಗಿ ಗ್ರಾಮದ ಸ್ನೇಹಿತರಾದ ವೆಂಕಟರೆಡ್ಡಿ, ಸುಬ್ರಮಣಿ ಹಾಗೂ ಇತರರೊಂದಿಗೆ ₹10 ಸಾವಿರ ಬೆಟ್ಟಿಂಗ್ ಕಟ್ಟಿದ್ದ.
ಐದಾರು ಚಿಕ್ಕ ಬಾಟಲ್ ಮದ್ಯ ಸೇವಿಸಿದ ಯುವಕ ಅಸ್ವಸ್ಥನಾದ. ಸ್ಥಳೀಯರು ಆತನನ್ನು ಮುಳಬಾಗಿಲು ಆಸ್ಪತ್ರೆಗೆ ಸಾಗಿಸಿದರು. ಚಿಕಿತ್ಸೆಗೆ ಸ್ಪಂದಿಸದೆ ಆತ ಮೃತಪಟ್ಟ. ಒಂಬತ್ತು ದಿನಗಳ ಹಿಂದೆಯಷ್ಟೇ ಆತನ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು.
ಮದ್ಯ ಕುಡಿ ಯಲು ಪ್ರಚೋದನೆ ನೀಡಿದ ಆರೋಪದ ಮೇಲೆ ಸ್ನೇಹಿತರಾದ ವೆಂಕಟರೆಡ್ಡಿ, ಸುಬ್ರಮಣಿ ಹಾಗೂ ಇನ್ನೂ ನಾಲ್ವರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ವೆಂಕಟರೆಡ್ಡಿ ಹಾಗೂ ಸುಬ್ರಮಣಿಯನ್ನು ಬಂಧಿಸಿದ್ದು, ಉಳಿದ ನಾಲ್ವರು ಪರಾರಿಯಾಗಿದ್ದಾರೆ. ನಂಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.