ADVERTISEMENT

ಆ.7–8ಕ್ಕೆ ನಟಿ ಭಾವನಾ ರಾಮಣ್ಣ ನೇತೃತ್ವದಲ್ಲಿ ಭರತನಾಟ್ಯ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 20:41 IST
Last Updated 20 ಜುಲೈ 2024, 20:41 IST
   

ಬೆಂಗಳೂರು: ನಟಿ ಭಾವನಾ ರಾಮಣ್ಣ ನೇತೃತ್ವದ ಹೂವು ಫೌಂಡೇಶನ್ ಫಾರ್ ಆರ್ಟ್ಸ್ ಸಂಸ್ಥೆಯು ಆ.7 ಮತ್ತು 8ರಂದು ರಾಜ್ಯ ಮಟ್ಟದ ಭರತನಾಟ್ಯ ಸ್ಪರ್ಧೆ ಹಮ್ಮಿಕೊಂಡಿದೆ.

‘ವರ್ಣ ಸ್ಪರ್ಧೆ’ ಶೀರ್ಷಿಕೆ ಯಡಿ ನಡೆಯುವ ಈ ಸ್ಪರ್ಧೆಗೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗವಿದೆ. ವರ್ಣ ನೃತ್ಯವನ್ನು ಮಾತ್ರ ಈ ಸ್ಪರ್ಧೆಗೆ ಪರಿಗಣಿಸಲಾಗುತ್ತದೆ. ಪ್ರಥಮ ಬಹುಮಾನ ₹1 ಲಕ್ಷ‌, ದ್ವಿತೀಯ ಬಹುಮಾನ ₹50 ಸಾವಿರ ಹಾಗೂ ತೃತೀಯ ಬಹುಮಾನ ₹30 ಸಾವಿರ ನಗದು ಒಳಗೊಂಡಿದೆ. ಇದೇ 25 ರೊಳಗೆ hoovufoundation.com ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿವರಕ್ಕೆ: 9901305155 ಅಥವಾ 7483490143

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.