ADVERTISEMENT

ಬೆಂಗಳೂರಿನಲ್ಲಿ 40 ಬಸ್‌ಗಳಿಗೆ ಕಲ್ಲು: ಕಿಟಕಿ, ಗಾಜು ಪುಡಿ ಪುಡಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2019, 4:17 IST
Last Updated 9 ಜನವರಿ 2019, 4:17 IST
   

ಬೆಂಗಳೂರು: ಭಾರತ್ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಬುಧವಾರ ಕಿಡಿಗೇಡಿಗಳು ಬಿಎಂಟಿಸಿ ಬಸ್ ಗಳಿಗೆ ಕಲ್ಲು ಎಸೆದು ಹಾನಿ ಮಾಡಿದ್ದಾರೆ.

ವಿವಿಧ ಡಿಪೋಗಳಿಗೆ ಸೇರಿದ 40 ಬಸ್ಸುಗಳಿಗೆ ಹಾನಿಯಾಗಿದೆ. ಪರಿಸ್ಥಿತಿಯ ಗಂಭೀರತೆ ಅರಿತ ಬಿಎಂಟಿಸಿ ಅಧಿಕಾರಿಗಳು ನಗರದಲ್ಲಿ ಬಸ್ ಗಳ ಸಂಚಾರವನ್ನು ಸ್ಥಗಿತಗೊಳಿಸಿದರು. ಮಂಗಳವಾರ ರಾತ್ರಿಯಿಂದ ಬುಧವಾರ ನಸುಕಿನವರೆಗೆ ಕಲ್ಲುತೂರಾಟ ನಡೆದಿದೆ.

ಸಂಚಾರ ವ್ಯವಸ್ಥೆಗೆ ತೊಂದರೆಯಾದ ಕಾರಣ ಜನರು ಪರದಾಡುತ್ತಿದ್ದಾರೆ. ಓಲಾ, ಉಬರ್ ಟ್ಯಾಕ್ಸಿ ಸಂಚಾರ ಎಂದಿನಂತೆ ಇದೆ‌. ಬಸ್ ಡಿಪೋ ಗಳಲ್ಲಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.

ADVERTISEMENT

12 ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆದಿದೆ. 8 ವೋಲ್ವೋ, 4 ಕರ್ನಾಟಕ ಸಾರಿಗೆ ಬಸ್ಸುಗಳು ಹಾನಿಗೊಳಗಾಗಿವೆ. ಮೈಸೂರು ರಸ್ತೆ, ವಿಲ್ಸನ್ ಗಾರ್ಡನ್ ಆಡುಗೋಡಿ , ನೆಲಮಂಗಲ ಮಾದನಾಯಕನಹಳ್ಳಿಯಲ್ಲಿ ಘಟನೆಗಳು ನಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.