ADVERTISEMENT

ಬೆಂಗಳೂರಿನಲ್ಲಿ ವಿಶಿಷ್ಟ ಹಬ್ಬ: ಚಿಂತನೆಯ ಚಾವಡಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2020, 7:35 IST
Last Updated 23 ಫೆಬ್ರುವರಿ 2020, 7:35 IST
ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ  ಹಬ್ಬ
ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ ಹಬ್ಬ   

ಬೆಂಗಳೂರು:ದೊಮ್ಮಲೂರಿನ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ) ಹಬ್ಬ ನಡೆಯುತ್ತಿದ್ದು, ಮಕ್ಕಳು, ಪೋಷಕರು, ಚಿಂತಕರ ವಿಶಿಷ್ಟ ಸಂಗಮ ನೆಲೆಸಿದೆ.

ಮಕ್ಕಳ ಮನರಂಜನೆಗೆ ಹಲವು ಆಟಗಳು, ತಿಂಡಿ, ಮನರಂಜನೆಯ ಕೂಟಗಳಿದ್ದರೆ, ಪೋಷಕರಿಗೆ ಮನರಂಜನೆಗೆ ಸಂಗೀತ, ರಂಗಗೀತೆಗಳು ರಂಜಿಸುತ್ತಿವೆ.

ಚಿಂತಕರಿಗಂತೂ ಇದೊಂದು ನಿಜವಾದ ಹಬ್ಬವಾಗಿದೆ. ಯಾಕೆಂದರೆ ಸಿಎಎ, ಎನ್ ಆರ್ ಸಿ, ವಿವಾದ. ಹೆಚ್ಚುತ್ತಿರುವ ಚೀನಾದ ಪ್ರಾಮುಖ್ಯತೆಯಂತಹ ವಿಷಯಗಳಲ್ಲಿ ಗಂಭೀರ ಚಿಂತನೆಗಳು ನಡೆಯುತ್ತಿವೆ.

ADVERTISEMENT

ಬೆಂಗಳೂರು ನಗರ ಯಾವ ರೀತಿ ಬದಲಾಗುತ್ತಿದೆ ಎಂಬುದನ್ನು ತಿಳಿಸುವ ಕುತೂಹಲಕಾರಿ ಗೋಷ್ಠಿಗಳೂ ನಡೆಯುತ್ತಿವೆ.

ಒಟ್ಟಾರೆ ನಾಲ್ಕು ವೇದಿಕೆಗಳು ಹಾಗೂ ಬಿಐಸಿಯ ಆಕರ್ಷಕ ಕಟ್ಟಡದ ತುಂಬೆಲ್ಲ ಲವಲವಿಕೆ ಮನೆಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.