ADVERTISEMENT

ಸಿಕ್ಕಿಬಿದ್ದರು ಬೈಕ್‌ ಕಳ್ಳರು

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2018, 20:03 IST
Last Updated 5 ಡಿಸೆಂಬರ್ 2018, 20:03 IST

ಬೆಂಗಳೂರು: ನಗರದ ಪಾರ್ಕಿಂಗ್ ಸ್ಥಳ ಹಾಗೂ ಮನೆ ಮುಂದೆ ನಿಲ್ಲಿಸುತ್ತಿದ್ದ ಬೈಕ್‌ಗಳನ್ನು ಕಳವು ಮಾಡುತ್ತಿದ್ದ ಮೂವರನ್ನು ಮೈಕೊ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜೆ.ಪಿ.ನಗರ 2ನೇ ಹಂತದ ಶೇಖ್ ಆಶಿಫ್ ಅಲಿಯಾಸ್ ಕಾಣೆ (20), ರಾಗಿಗುಡ್ಡದ ಮಾರಿಮುತ್ತು ಅಲಿಯಾಸ್ ಮಾರಿ (22) ಹಾಗೂ ಸುಂಕದಕಟ್ಟೆಯ ಸುಮನ್ ಅಲಿಯಾಸ್ ಜಿಗಣೆ (21) ಬಂಧಿತರು. ಅವರಿಂದ ₹16 ಲಕ್ಷ ಮೌಲ್ಯದ 21 ಬೈಕ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

‘ಐಷಾರಾಮಿ ಜೀವನಕ್ಕಾಗಿ ಹಣ ಹೊಂದಿಸಲು ಆರೋಪಿಗಳು ನಕಲಿ ಕೀ ಬಳಸಿ ಹಾಗೂ ಹ್ಯಾಂಡಲ್ ಲಾಕ್ ಮುರಿದು ಬೈಕ್‌ಗಳನ್ನು ಕದಿಯುತ್ತಿದ್ದರು. ಬೈಕ್‌ಗಳನ್ನು ಹಲವೆಡೆ ನಿಲ್ಲಿಸುತ್ತಿದ್ದ ಆರೋಪಿಗಳು, ಒಂದೊಂದೇ ಬೈಕ್‌ ತಂದು ₹2 ಸಾವಿರದಿಂದ ₹5 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.

ADVERTISEMENT

‘ಆರೋಪಿಗಳ ಬಂಧನದಿಂದ ಹುಳಿಮಾವು, ಪರಪ್ಪನ ಅಗ್ರಹಾರ, ಮೈಕೊ ಲೇಔಟ್, ಕೋಣನಕುಂಟೆ, ಜೆ.ಪಿ.ನಗರ, ಸುಬ್ರಹ್ಮಣ್ಯಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.