ADVERTISEMENT

ಬೆಂಗಳೂರು: ‘ಜೈವಿಕ ಇಂಧನ ನೀತಿ ಶೀಘ್ರ ಅನುಷ್ಠಾನ’

​ಪ್ರಜಾವಾಣಿ ವಾರ್ತೆ
Published 23 ಮೇ 2025, 16:20 IST
Last Updated 23 ಮೇ 2025, 16:20 IST
   

ಬೆಂಗಳೂರು: ‘ನೂತನ ಜೈವಿಕ ಇಂಧನ ನೀತಿ’ಯನ್ನು ಶೀಘ್ರವೇ ಅನುಷ್ಠಾನಗೊಳಿಸಲು ಕ್ರಮಕೈಗೊಳ್ಳಲಾಗುವುದು’ ಎಂದು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್.ಈ ಸುಧೀಂದ್ರ ತಿಳಿಸಿದರು.

ಮಂಡಳಿಯ 42ನೇ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಉದ್ದೇಶಿತ ಜೈವಿಕ ಇಂಧನ ನೀತಿ ಕುರಿತು ಚರ್ಚೆ ನಡೆಸಿದ ಅವರು, ‘ಜೈವಿಕ ಇಂಧನ ನೀತಿ ಜಾರಿಗೊಳಿಸುವ ನಿಟ್ಟಿನಲ್ಲಿ ಕಾರ್ಯಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ’ ಎಂದು ವಿವರಿಸಿದರು. 

ಇದೇ ವೇಳೆ 2024-25ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಲಾಯಿತು.

ADVERTISEMENT

ಕಾರ್ಯಕಾರಿ ಸಮಿತಿಯ ಸದಸ್ಯ ಕೃಷ್ಣನ್‌, ‘ಜೈವಿಕ ಇಂಧನ ಕ್ಷೇತ್ರದಲ್ಲಿ ಬಯೋಬ್ರಿಕೆಟ್ಸ್‌, ಬಯೋಪಿಲೆಟ್ಸ್‌, ಕಂಪ್ರೆಸ್ಡ್‌ ಬಯೋಗ್ಯಾಸ್‌, ಬಯೋಮಾಸ್‌ ಆಧಾರಿತ ಗ್ರೀನ್‌ ಹೈಡ್ರೋಜನ್‌ಗಳು ಆಟೊಮೊಬೈಲ್‌ ಕಂಪನಿಗಳಲ್ಲಿನ ವಿದ್ಯುತ್‌ ಬೇಡಿಕೆಗಳನ್ನು ಸುಧಾರಿಸುವಲ್ಲಿ ನೆರವಾಗಲಿವೆ’ ಎಂದು ತಿಳಿಸಿದರು.

ರಾಜ್ಯದಲ್ಲಿ ಜೈವಿಕ ಇಂಧನ ಉತ್ಪಾದನೆಗೆ ಅವಶ್ಯವಾದ ಹೊಂಗೆ, ಬೇವು, ಹಿಪ್ಪೆ ಸೀಮರೂಬ ಮರಗಳಿಂದ ಬೀಜಗಳನ್ನು ಸಂಗ್ರಹಿಸುವ ಕುರಿತು ಉಪ ಸಮಿತಿ ರಚಿಸಲು ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರು ಸೂಚಿಸಿದರು.

ಸಭೆಯಲ್ಲಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್‌.ಎಲ್‌, ಸದಸ್ಯ ದಿವಾಕರ್‌ ರಾವ್‌, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಉಪ ಕಾರ್ಯದರ್ಶಿ ಎಂ.ಎಂ.ರಾಜು, ಡಿಸಿಎಫ್‌ ಮತ್ತು ತಾಂತ್ರಿಕ ಅಧಿಕಾರಿ ಲೋಹಿತ್‌ ಬಿ.ಆರ್‌ ಹಾಗೂ ಕೆಎಸ್‌ಆರ್‌ಟಿಸಿ, ಕೆಎಸ್‌ಸಿಎಸ್‌ಟಿ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.