ADVERTISEMENT

ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ 23 ವರ್ಷದ ಮಹಿಳೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2022, 15:39 IST
Last Updated 22 ನವೆಂಬರ್ 2022, 15:39 IST
ತ್ರಿವಳಿ ಶಿಶುಗಳೊಂದಿಗೆ ತಾಯಿ ಸುಷ್ಮಾ, ತಂದೆ ಆನಂದ್, ವೈದ್ಯರಾದ ಡಾ. ಸರಸ್ವತಿ ರಮೇಶ್ ಹಾಗೂ ಡಾ. ಸ್ಮೃತಿ ಗೌರಂಗ್ ಇದ್ದಾರೆ. 
ತ್ರಿವಳಿ ಶಿಶುಗಳೊಂದಿಗೆ ತಾಯಿ ಸುಷ್ಮಾ, ತಂದೆ ಆನಂದ್, ವೈದ್ಯರಾದ ಡಾ. ಸರಸ್ವತಿ ರಮೇಶ್ ಹಾಗೂ ಡಾ. ಸ್ಮೃತಿ ಗೌರಂಗ್ ಇದ್ದಾರೆ.    

ಬೆಂಗಳೂರು: ನಗರದ 23 ವರ್ಷದ ಮಹಿಳೆಯೊಬ್ಬರು ಮೂವರು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಸುಷ್ಮಾ ಆನಂದ್ ಅವರುಎರಡು ಗಂಡು ಹಾಗೂ ಒಂದು ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ಜೆ.ಪಿ.ನಗರದ ಅರ್ಕಾ ಅನುಗ್ರಹ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಟ್ಟಿದ್ದ ಅವರಿಗೆ, ಅಲ್ಲಿನ ಸ್ತ್ರೀರೋಗ ತಜ್ಞೆ ಡಾ. ಸರಸ್ವತಿ ರಮೇಶ್ ಅವರ ಮಾರ್ಗದರ್ಶನದಲ್ಲಿ ವೈದ್ಯರು ಇದೇ 19ರಂದು ಹೆರಿಗೆ ಮಾಡಿಸಿದ್ದಾರೆ. ತಾಯಿ ಹಾಗೂ ಮಕ್ಕಳು ಆರೋಗ್ಯವಿದ್ದಾರೆ.

ಮೊದಲು ಜನಿಸಿದ ಗಂಡು ಮಗು 1.5 ಕೆ.ಜಿ ತೂಕ ಇದೆ. 30 ಸೆಕೆಂಡ್ ನಂತರ ಜನಿಸಿದ ಹೆಣ್ಣು ಮಗು 1.7 ಕೆ.ಜಿ ತೂಕವಿದ್ದು, ಮೂರನೇ ಮಗು 3.15 ನಿಮಿಷ ಅಂತರದಲ್ಲಿ ಜನಿಸಿದೆ. ಇದು 1.8 ಕೆ.ಜಿ. ತೂಕವಿದೆ. ಮೂರು ನವಜಾತ ಶಿಶುಗಳು ಜನಿಸಿದ ಕೂಡಲೇ ಅತ್ತಿವೆ. ಹಾಗಾಗಿ, ಇವರಿಗೆ ಯಾವುದೇ ರೀತಿಯ ತೊಂದರೆಯಿಲ್ಲ ಎನ್ನುವುದು ದೃಢಪಟ್ಟಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ADVERTISEMENT

‘ಮೂರು ಶಿಶುಗಳೂ ಆರೋಗ್ಯವಾಗಿವೆ. ಈ ರೀತಿಯ ಪ್ರಕರಣ ಅಪರೂಪ. 15 ವರ್ಷಗಳ ಹಿಂದೆಡಾ. ಸರಸ್ವತಿ ರಮೇಶ್ ಅವರು ಬಸವನಗುಡಿಯ ಎ.ವಿ. ಆಸ್ಪತ್ರೆಯಲ್ಲಿ ಮೂರು ಶಿಶುಗಳ ಹೆರಿಗೆ ಮಾಡಿಸಿದ್ದರು. ಆ ಮಕ್ಕಳು ಆರೋಗ್ಯವಾಗಿ ಇದ್ದಾರೆ’ ಎಂದು ಆಸ್ಪತ್ರೆಯ ಮಕ್ಕಳ ತಜ್ಞೆ ಡಾ. ಸ್ಮೃತಿ ಗೌರಂಗ್ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.