ADVERTISEMENT

ಠಾಣೆಗೆ ನುಗ್ಗಲು ಶಾಸಕ ಮುನಿರತ್ನ ಬೆಂಬಲಿಗರ ಯತ್ನ; ಬೇರೆಡೆಗೆ ಸ್ಥಳಾಂತರ

ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 18:16 IST
Last Updated 14 ಸೆಪ್ಟೆಂಬರ್ 2024, 18:16 IST
<div class="paragraphs"><p>ಮುನಿರತ್ನ ಬಂಧನ ಖಂಡಿಸಿ ಬೆಂಬಲಿಗರ ಪ್ರತಿಭಟನೆ</p></div>

ಮುನಿರತ್ನ ಬಂಧನ ಖಂಡಿಸಿ ಬೆಂಬಲಿಗರ ಪ್ರತಿಭಟನೆ

   

ಬೆಂಗಳೂರು: ಶಾಸಕ ಮುನಿರತ್ನ ಅವರನ್ನು ಬೌರಿಂಗ್ ಆಸ್ಪತ್ರೆಗೆ ಶನಿವಾರ ರಾತ್ರಿಯೇ ಕರೆದೊಯ್ದು ‌ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು.‌ ನಂತರ, ಅಲ್ಲಿಂದ ನೇರವಾಗಿ ಅಶೋಕ ನಗರ ಠಾಣೆಗೆ‌ ಸ್ಥಳಾಂತರ ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ.

ಇದಕ್ಕೂ ಮೊದಲು ವೈಯಾಲಿಕಾವಲ್ ಠಾಣೆಗೆ ಶಾಸಕರ ಬೆಂಬಲಿಗರು ನುಗ್ಗಲು ಯತ್ನಿಸಿದ್ದರು. ಭದ್ರತಾ ‌ದೃಷ್ಟಿಯಿಂದ ಆರೋಪಿಯನ್ನು ಬೇರೆ ಠಾಣೆಗೆ ಸ್ಥಳಾಂತರ ಮಾಡಲಾಗಿತ್ತು. ಮಾಹಿತಿ ತಿಳಿದು ಅಶೋಕ ನಗರ ಠಾಣೆ ಬಳಿಗೂ ಬಂದ ಬೆಂಬಲಿಗರು ಠಾಣೆ ಒಳಪ್ರವೇಶಿಸಲು ಯತ್ನಿಸಿದರು. ಅಲ್ಲದೇ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

'ಷಡ್ಯಂತ್ರ ನಡೆಸಿ ಬಂಧಿಸಲಾಗಿದೆ‌. ನಮ್ಮ ನಾಯಕ ಯಾವುದೇ ತಪ್ಪು ಎಸಗಿಲ್ಲ. ಸುಳ್ಳು ಆರೋಪ‌‌ ಮಾಡಿ ದೂರು ನೀಡಲಾಗಿದೆ. ತಕ್ಷಣವೇ ಬಿಡುಗಡೆ ಮಾಡಬೇಕು' ಎಂದು ಬೆಂಬಲಿಗರು ಆಗ್ರಹಿಸಿದರು.

ಸ್ಥಳ ಮಹಜರು: ದೂರು ನೀಡಿದ ಚೆಲುವರಾಜು ಅವರನ್ನು ಶಾಸಕರ ಕಚೇರಿಗೆ ಕರೆದೊಯ್ದು ಪೊಲೀಸರು ಸ್ಥಳ ಮಹಜರು ನಡೆಸಿದರು.

'ದೂರು ಕೊಟ್ಟವರ ವಿರುದ್ಧ ಪ್ರತಿ ‌ದೂರು ನೀಡಲಾಗಿದೆ. ಚೆಲುವರಾಜು ಹಾಗೂ ವೇಲುನಾಯ್ಕರ್ ನೀಡಿರುವ ದೂರಿನಲ್ಲಿ ಸಾಕ್ಷಿಗಳು ಇಲ್ಲ' ಎಂದು ಮುನಿರತ್ನ ಪರ ವಕೀಲ ಸದಾನಂದ ಶಾಸ್ತ್ರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.