ADVERTISEMENT

ಆ.15ಕ್ಕೆ ರಕ್ತದಾನ ಶಿಬಿರ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 19:00 IST
Last Updated 10 ಆಗಸ್ಟ್ 2021, 19:00 IST

ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್ಐ) ರಕ್ತದಾನಿಗಳ ವೇದಿಕೆಯು ಇದೇ 15ರ ಸ್ವಾತಂತ್ರ್ಯ ದಿನದ ಅಂಗವಾಗಿ ರಾಜ್ಯದಾದ್ಯಂತ 75ಕ್ಕೂ ಹೆಚ್ಚು ರಕ್ತದಾನ ಶಿಬಿರಗಳನ್ನು ಹಮ್ಮಿಕೊಂಡಿದೆ ಎಂದು ಪಿಎಫ್ಐ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್ ತಿಳಿಸಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಇತ್ತೀಚಿನ ದಿನಗಳಲ್ಲಿ ಸಕಾಲದಲ್ಲಿ ರಕ್ತ ಲಭ್ಯವಾಗದೆ ಹಲವು ರೋಗಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ವಾರ್ಷಿಕ 11.5 ಲಕ್ಷ ಯುನಿಟ್‌ಗಳಷ್ಟು ರಕ್ತದ ಕೊರತೆ ಇದೆ. ಕೋವಿಡ್‌ ಬಂದ ನಂತರ ರಕ್ತ ಸಂಗ್ರಹಣೆ ಮತ್ತಷ್ಟು ಕುಸಿದಿದೆ’ ಎಂದರು.

‘ಸಾರ್ವಜನಿಕರನ್ನು ರಕ್ತದಾನಕ್ಕೆ ಪ್ರೇರೇಪಿಸುವುದು ಹಾಗೂ ರಕ್ತ ಸಂಗ್ರಹಣೆ ಹೆಚ್ಚಿಸುವ ಸಲುವಾಗಿ ಪಿಎಫ್ಐ ರಕ್ತದಾನಿಗಳ ವೇದಿಕೆ ವತಿಯಿಂದ ಜು.15ರಿಂದ ರಕ್ತದಾನ ಅಭಿಯಾನಗಳನ್ನು ರಾಜ್ಯದಾದ್ಯಂತ ನಡೆಸಿದೆ. ಸ್ವಾತಂತ್ರ್ಯ ದಿನದಂದು 75 ಸ್ಥಳಗಳಲ್ಲಿ ರಕ್ತದಾನ ಶಿಬಿರಗಳನ್ನು ವಿಶೇಷವಾಗಿ ಹಮ್ಮಿಕೊಂಡಿದ್ದು, 10 ಸಾವಿರ ಯುನಿಟ್ ರಕ್ತ ಸಂಗ್ರಹಿಸುವ ಗುರಿ ಹೊಂದಿದ್ದೇವೆ. ಆಸಕ್ತರು ರಕ್ತದಾನ ಮಾಡಬಹುದು’ ಎಂದರು.

ADVERTISEMENT

ಸಂಪರ್ಕ: 9886105995

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.