
ಬೆಂಗಳೂರು: ನಮ್ಮ ಮೆಟ್ರೊ ಹಳದಿ ಮಾರ್ಗದ ಮೆಟ್ರೊ ರೈಲು ಹೆಬ್ಬಗೋಡಿ ಡಿಪೊದಲ್ಲಿ ಒಂದು ತಿಂಗಳ ಹಿಂದೆ ಹಳಿ ತಪ್ಪಿದ್ದು, ಈ ಬಗ್ಗೆ ತನಿಖೆ ನಡೆಸಲು ಶೋಧನಾ ಸಮಿತಿಯನ್ನು ರಚಿಸಲಾಗಿದೆ.
ಹಳದಿ ಮಾರ್ಗಕ್ಕೆ ಚಾಲಕರಹಿತ ಎಂಜಿನ್ ಹೊಂದಿರುವ ಎಂಟು ರೈಲುಗಳು ಬಂದಿದ್ದು, ಅದರಲ್ಲಿ ಮೂರನೇ ರೈಲು ಜನವರಿ 15ರಂದು ಹೆಬ್ಬಗೋಡಿ ಡಿಪೊದಿಂದ ಬೊಮ್ಮಸಂದ್ರ ಮೆಟ್ರೊ ನಿಲ್ದಾಣದ ಕಡೆಗೆ ಹೊರಡುವ ವೇಳೆ ಹಳಿ ತಪ್ಪಿದೆ. ಇದರಿಂದ ಟ್ರ್ಯಾಕ್ ಸ್ಲೀಪರ್ (ಹಳಿ ಆಧಾರ), ಟ್ರ್ಯಾಕ್ಷನ್ ಹಾಗೂ ಬೋಗಿಗೆ ಹಾನಿಯಾಗಿದೆ.
ಸಿಬ್ಬಂದಿಯ ಅಜಾಗರೂಕತೆ, ಸಿಗ್ನಲಿಂಗ್ ಸಮಸ್ಯೆ, ಇತರೆ ತಾಂತ್ರಿಕ ದೋಷ ಸಹಿತ ಯಾವ ಕಾರಣದಿಂದ ಮೆಟ್ರೊ ರೈಲು ಹಳಿ ತಪ್ಪಿದೆ ಎಂದು ಕಂಡುಕೊಳ್ಳಲು ಶೋಧನಾ ಸಮಿತಿ ರಚಿಸಲಾಗಿದೆ. ರೈಲು ಆಪರೇಟರ್, ಡಿಪೊ ನಿಯಂತ್ರಕರು, ಸಿಬ್ಬಂದಿ ಸಹಿತ ಸಂಬಂಧಪಟ್ಟವರನ್ನು ಸಮಿತಿ ವಿಚಾರಣೆ ನಡೆಸಿದೆ. ವರದಿ ಸಲ್ಲಿಕೆಯಾದ ಬಳಿಕ ಮುಂದಿನ ಕ್ರಮಗಳು ಜರುಗಲಿವೆ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.