ಬೆಂಗಳೂರು: ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನ ನಿರ್ವಹಣಾ ಅಧ್ಯಯನ ವಿಭಾಗ ವತಿಯಿಂದ ‘ಸಿದ್ಧಾಂತದಿಂದ ಆಚರಣೆ: ಪ್ರವೇಶಿಸಬಹುದಾದ ಎಐ ಮತ್ತು ಡೇಟಾ ಸೈನ್ಸ್ ಅಪ್ಲಿಕೇಶನ್‌ಗಳು’ ಕುರಿತು ಮೂರು ದಿನಗಳ ರಾಷ್ಟ್ರೀಯ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (ಎಐಸಿಟಿಇ) ಭಾರತೀಯ ಭಾಷೆಗಳ ಪ್ರಗತಿ ಮತ್ತು ಪೋಷಣೆಗಾಗಿ ರೋಮಾಂಚಕ ವಕಾಲತ್ತು (ವಿಎಎಎನ್‌ಐ) ಉಪಕ್ರಮದಡಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.
ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ವಿಜ್ಞಾನ ಕ್ಷೇತ್ರಗಳ ತತ್ವಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ಮಾಡುವುದು. ನೈಜ ಜೀವನದ ಸಮಸ್ಯೆಗಳಿಗೆ ಎಐ ತಂತ್ರಜ್ಞಾನವನ್ನು ಅನ್ವಯಿಸುವ ಪ್ರಾಯೋಗಿಕ ಅನುಭವ ನೀಡುವುದು ಈ ಕಾರ್ಯಾಗಾರದ ಉದ್ದೇಶವಾಗಿತ್ತು.
ಪ್ರಾಂಶುಪಾಲ ಭೀಮಶಾ ಆರ್ಯ ಮಾತನಾಡಿ, ‘ನವೀನ ತಂತ್ರಜ್ಞಾನ ಮತ್ತು ಸಂಶೋಧನಾ ಅಭಿರುಚಿಗಳನ್ನು ಬೆಳೆಸುವಲ್ಲಿ ಇಂತಹ ಕಾರ್ಯಾಗಾರಗಳು ಪ್ರಮುಖ ಪಾತ್ರ ವಹಿಸುತ್ತವೆ’ ಎಂದು ತಿಳಿಸಿದರು.
ಆಯೋಜಕರಾದ ಮಿನು ಜಕಾರಿಯಾ, ಪ್ರಾಧ್ಯಾಪಕಿ ಪ್ರತಿಮಾ ಭಟ್, ಎ. ಸತ್ಯ ನಂದಿನಿ, ಉಪ ಪ್ರಾಂಶುಪಾಲ ಎಲ್. ರವಿಕುಮಾರ್, ಆಡಳಿತ ಉಪಪ್ರಾಂಶುಪಾಲ ಶೇಷಚಲಂ ಡಿ. ಕಾರ್ಯಕ್ರಮ ನಡೆಸಿಕೊಟ್ಟರು.
ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ನಾಗೇಂದ್ರ ಎಸ್., ಸಿ.ಎನ್.ಬಿ. ರಾಜೇಶ್, ಮನಮೋಹನ್, ವಿಂಧ್ಯಾಶ್ರೀ, ಧನುಷ್ ಶಿವದಾಸ್, ಪಿಯೂಷ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.