ADVERTISEMENT

‘ಬೆಂಗಳೂರು ದರ್ಶಿನಿ’ಗೆ ರಿಯಾಯಿತಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 18:55 IST
Last Updated 4 ಫೆಬ್ರುವರಿ 2020, 18:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಗರದ ಪ್ರೇಕ್ಷಣೀಯ ಸ್ಥಳಗಳಿಗೆ ಕರೆದೊಯ್ಯುವ ಬಿಎಂಟಿಸಿಯ ‘ಬೆಂಗಳೂರು ದರ್ಶಿನಿ’ ಬಸ್‌ ಸೇವೆಯಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿ ದರ ನಿಗದಿ ಮಾಡಲಾಗಿದೆ.

ಸದ್ಯದ ದರ ವಯಸ್ಕರಿಗೆ ₹400 ಹಾಗೂ ಮಕ್ಕಳಿಗೆ ₹300.ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಸಗಟು ಬುಕ್ಕಿಂಗ್ ಮಾಡಿ ಈ ರಿಯಾಯಿತಿ ಪಡೆಯಬಹುದು.

ವಿದ್ಯಾರ್ಥಿಗಳಿಗಾಗಿ ರಿಯಾಯಿತಿ ಯಲ್ಲಿ ಒಂದು ಆಸನಕ್ಕೆ ₹200 ಪ್ರಯಾಣದರ ನಿಗದಿಪಡಿಸಲಾಗಿದೆ.

ADVERTISEMENT

ಈ ಸೌಲಭ್ಯ ಪಡೆಯಲು ಬಸ್ಸಿನ ಎಲ್ಲ ಆಸನಗಳನ್ನು ಕಾಯ್ದಿರಿಸಬೇಕು. ಆಸಕ್ತ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಕೆಂಪೇಗೌಡ ಬಸ್‌ ನಿಲ್ದಾಣ ಅಥವಾ ಸ್ಥಳೀಯ ಬಿಎಂಟಿಸಿ ಘಟಕದಲ್ಲಿ ಸಂಸ್ಥೆಯ ಹೆಸರು, ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಸಿಬ್ಬಂದಿಯ ಮಾಹಿತಿಯನ್ನು ಲಿಖಿತ ರೂಪದಲ್ಲಿ ಸಲ್ಲಿಸಬೇಕು.

ಮುಂಗಡ ಬುಕ್ಕಿಂಗ್‌ನೊಂದಿಗೆ ಪೂರ್ಣ ಪ್ರಯಾಣ ದರವನ್ನು ಪಾವತಿಸಬೇಕು. ಪಾವತಿಸಿದ ಹಣ ಹಿಂತಿರುಗಿಸಲು ಅವಕಾಶವಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.