
ಬೆಂಗಳೂರು: ಬಿಎಂಟಿಸಿ ವತಿಯಿಂದ ಘಟಕ–8 ಯಶವಂತಪುರದಲ್ಲಿ ಶನಿವಾರ ರಾಷ್ಟ್ರೀಯ ಚಾಲಕರ ದಿನ ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ವಿ.ಎಸ್. ಆರಾಧ್ಯ ಮಾತನಾಡಿ, ‘ದೇಶದಲ್ಲಿ ಮಾದರಿ ಮಹಾನಗರ ಸಾರಿಗೆ ಸಂಸ್ಥೆಯಾಗಿ ಬಿಎಂಟಿಸಿ ಗುರುತಿಸಿಕೊಂಡಿರುವುದು ಚಾಲಕರು ಹಾಗೂ ನಿರ್ವಾಹಕರ ಶಿಸ್ತು, ನಿಷ್ಠೆ ಮತ್ತು ಪ್ರಾಮಾಣಿಕ ಸೇವೆಯ ಫಲವಾಗಿದೆ. ನಮ್ಮ ಬಸ್‌ಗಳ ಅಪಘಾತ ಪ್ರಮಾಣವೂ ಕಡಿಮೆಯಾಗಿದೆ’ ಎಂದು ಶ್ಲಾಘಿಸಿದರು.
ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್ ಕೆ.ಬಿ, ಮುಖ್ಯ ಸಂಚಾರ ವ್ಯವಸ್ಥಾಪಕ ಜಿ.ಟಿ. ಪ್ರಭಾಕರ ರೆಡ್ಡಿ, ಉತ್ತರ ವಲಯ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಎಸ್.ಆರ್. ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಚಿನ್ನದ ಪದಕ ವಿಜೇತ ಚಾಲಕ ಲೋಕೇಶ್ ಸಿ. ಅವರು ಸುರಕ್ಷಿತ ಚಾಲನೆಯ ಬಗ್ಗೆ ತನ್ನ ಅನುಭವ ಹಂಚಿಕೊಂಡರು. ಎಲ್ಲ ಚಾಲಕರು ಹಾಗೂ ಚಾಲಕ–ನಿರ್ವಾಹಕರಿಗೆ ಹೂಗುಚ್ಛ ಮತ್ತು ಸಿಹಿ ಹಂಚಿ ಶುಭಕೋರಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.