ಬೆಂಗಳೂರು: ಬಸ್‌ನಲ್ಲಿರುವ ಆಸನಗಳಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ದ ಲೋಕೇಶ್‌ಕುಮಾರ್ ಎಂಬ ನಿರ್ವಾಹಕರಿಗೆ ಬಿಎಂಟಿಸಿ ನೋಟಿಸ್ ನೀಡಿದೆ.
‘ತಿಪ್ಪಸಂದ್ರದಿಂದ ಮಾರ್ಕೇಟ್‌ಗೆ ಹೋಗುವ ಮಾರ್ಗದಲ್ಲಿ ಸೋಮವಾರ ಹೆಚ್ಚಿನ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಮೂಲಕ ಸಂಸ್ಥೆಯ ನಿಯಮ ಉಲ್ಲಂಘಿಸಿದ್ದೀರಿ. ಕರ್ತವ್ಯದಲ್ಲಿ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ ವಹಿಸಿರುವ ನೀವು ಮೂರು ದಿನಗಳಲ್ಲಿ ಸಮಜಾಯಷಿ ನೀಡಬೇಕು. ಇಲ್ಲದಿದ್ದರೆ ಏಕಪಕ್ಷೀಯ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಬಿಎಂಟಿಸಿ ಅಂಜನಾಪುರ ಘಟಕ ವ್ಯವಸ್ಥಾಪಕರು ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.