ಬೆಂಗಳೂರು: ಬಿಎಂಟಿಸಿ ತನಿಖಾ ಸಿಬ್ಬಂದಿಅಕ್ಟೋಬರ್‌ನಲ್ಲಿ ನಡೆಸಿದ ತಪಾಸಣೆ ವೇಳೆ 5,557 ಟಿಕೆಟ್ ರಹಿತ ಪ್ರಯಾಣಿಕರಿಂದ ₹10.50 ಲಕ್ಷ ದಂಡ ಸಂಗ್ರಹಿಸಿದೆ. ನಿರ್ವಾಹಕರ ವಿರುದ್ಧ2,983 ಪ್ರಕರಣಗಳನ್ನು ದಾಖಲಿಸಿದೆ.
ಮಹಿಳಾ ಪ್ರಯಾಣಿಕರಿಗೆ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿದ 286 ಪುರುಷ ಪ್ರಯಾಣಿಕರಿಂದ ₹28,600 ಸಂಗ್ರಹಿಸಿದೆ. ಎರಡೂ ದಂಡದಿಂದಒಟ್ಟು ₹10.79 ಲಕ್ಷ ದಂಡ ಸಂಗ್ರಹವಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.