ADVERTISEMENT

‘ತೆರಿಗೆ ಕೊಡಲ್ಲ–ಮತ ಹಾಕಲ್ಲ’

ರಸ್ತೆ ದುರಸ್ತಿಗೆ ಒತ್ತಾಯಿಸಿ ಹರಳೂರಿನಲ್ಲಿ ಸಾರ್ವಜನಿಕರ ಬೃಹತ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2019, 23:02 IST
Last Updated 16 ನವೆಂಬರ್ 2019, 23:02 IST
ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನ
ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನ   

ಬೊಮ್ಮನಹಳ್ಳಿ: ‘ನಿದ್ರೆ ಮಾಡಿದ್ದು ಸಾಕು, ಕೆಲಸ ಮಾಡಿ.. ರಸ್ತೆ ಸರಿ ಮಾಡಿಸದಿದ್ದರೆ ಮತ ಹಾಕುವುದಿಲ್ಲ. ತೆರಿಗೆಯನ್ನೂ ಕೊಡುವುದಿಲ್ಲ. ಅನ್ನಭಾಗ್ಯ ಆಯಿತು, ರಸ್ತೆ ಭಾಗ್ಯ ಯಾವಾಗ ?’

ಕೂಡ್ಲು ಬಳಿಯ ಹರಳೂರು ರಸ್ತೆ ಜಂಕ್ಷನ್‌ನಿಂದ, ಸರ್ಜಾಪುರ ರಸ್ತೆವರೆಗೆ ಈ ರೀತಿ ವಿವಿಧ ಘೋಷಣೆ ಕೂಗುತ್ತಾ, ನೂರಾರು ಜನ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು. ಉತ್ತಮ ರಸ್ತೆ, ಪಾದಚಾರಿ ಮಾರ್ಗ, ಸೈಕಲ್ ಪಥ ನಿರ್ಮಾಣ, ವೈಜ್ಞಾನಿಕ ಕಸ ವಿಲೇವಾರಿ ಸೇರಿದಂತೆ ಇತರೆ ನಾಗರಿಕ ನಾಗರಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಬಿಬಿಎಂಪಿ ವಿಫಲವಾಗಿದೆ ಎಂದು ಪ್ರತಿಭಟನಕಾರರು ದೂರಿದರು.

ಇಪ್ಪತ್ತಕ್ಕೂ ಹೆಚ್ಚು ವಸತಿ ಸಮುಚ್ಚಯಗಳ ನಿವಾಸಿಗಳು ಹಾಗೂ ಸಾರ್ವಜನಿಕರು ‘ಫೈಟ್ ಫಾರ್ ರೈಟ್’ ವೇದಿಕೆ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಸಿದರು. ಪ್ರಮುಖ ಜಂಕ್ಷನ್‌ಗಳಲ್ಲಿ ಭಿತ್ತಿಪತ್ರ ಹಿಡಿದು ಪ್ರತಿಭಟನಕಾರರು ಮೆರವ
ಣಿಗೆ ಹೊರಡುತ್ತಿದ್ದಂತೆ ಸುಮಾರು ನಾಲ್ಕು ಸಾವಿರ ಮಂದಿ ಒಟ್ಟುಗೂಡಿದರು.ಇದರಿಂದ ಅಲ್ಲಲ್ಲಿ ಸಂಚಾರ ದಟ್ಟಣೆ ಉಂಟಾಯಿತು.

ADVERTISEMENT

ಸುಳಿಯದ ಜನಪ್ರತಿನಿಧಿಗಳು, ಅಧಿಕಾರಿಗಳು:ಪ್ರತಿಭಟನೆ ನಡೆಸುವ ವಿಚಾರವನ್ನು ಬಿಬಿಎಂಪಿ ಆಯುಕ್ತರು, ವಿಶೇಷ ಆಯುಕ್ತರು ಹಾಗು ಬೊಮ್ಮನಹಳ್ಳಿ ವಲಯ ಜಂಟಿ ಆಯುಕ್ತರಿಗೆ ಮಾಹಿತಿ ನೀಡಿ ಮನವಿ ಸ್ವೀಕರಿಸಲು ಬರುವಂತೆ ಕೋರಲಾಗಿತ್ತು. ಜತೆಗೆ ಹರಳೂರು ರಸ್ತೆಯು ಮೂರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಒಳಪಡುತ್ತದೆ. ಈ ಕ್ಷೇತ್ರದ ಶಾಸಕರಾದ ಶಿವಣ್ಣ, ಸತೀಶ್ ರೆಡ್ಡಿ, ಅರವಿಂದ ಲಿಂಬಾವಳಿ ಸೇರಿದಂತೆ ಸಂಬಂಧಪಟ್ಟ ಪಾಲಿಕೆ ಸದಸ್ಯರಿಗೂ ಪತ್ರದ ಮಾಹಿತಿ ನೀಡಲಾಗಿತ್ತು. ಆದರೂ ಯಾರೊಬ್ಬರ ಸುಳಿವಿಲ್ಲ ಎಂದು ಪ್ರತಿಭಟನಕಾರರು ದೂರಿದರು.

ಬಿಬಿಎಂಪಿ ಜಂಟಿ ಆಯುಕ್ತ ಎಂ.ರಾಮಕೃಷ್ಣ ಪ್ರತಿಕ್ರಿಯಿಸಿ ‘ನನಗೆ ಯಾರೂ ಮಾಹಿತಿ ನೀಡಿಲ್ಲ, ಮಾಹಿತಿ ನೀಡಿದ್ದಲ್ಲಿ ಪಾಲ್ಗೊಂಡು ಮನವಿ ಸ್ವೀಕರಿಸುತ್ತಿದ್ದೆ. ಇಲ್ಲಿನ ರಸ್ತೆ ಅಭಿವೃದ್ಧಿಗಾಗಿ ₹1 ಸಾವಿರ ಕೋಟಿ ಅನುದಾನ ನೀಡ
ಲಾಗಿದೆ.ಮೂರು ತಿಂಗಳೊಳಗೆ ಬೇಡಿಕೆ ಈಡೇರಿಸಲಾಗುವುದು’ ಎಂದರು.

‘7 ಕಿ.ಮೀ. ಉದ್ದದ ಈ ರಸ್ತೆಯಲ್ಲಿ ಪ್ರತಿನಿತ್ಯ ಲಕ್ಷಾಂತರ ಜನ ಸಂಚರಿಸುತ್ತಾರೆ. ಮೂರು ತಿಂಗಳ ಹಿಂದೆಯೂ ಪ್ರತಿಭಟನೆ ನಡೆಸಿ ಮನವಿ ಮಾಡಿದ್ದೆವು. ಹರಳೂರು ರಸ್ತೆಯನ್ನು 60 ಅಡಿ ಅಗಲೀಕರಣ ಮಾಡಿದರೆ ಸಮಸ್ಯೆ ಬಗೆಹರಿಯಲಿದೆ. ಇದಕ್ಕೆ ವಸತಿ ಸಮುಚ್ಚಯಗಳ ಸಂಘ ಕೂಡ ಒಪ್ಪಿದೆ. ಇದನ್ನು ಜಾರಿ ಮಾಡುವಲ್ಲಿ ಬಿಬಿಎಂಪಿ ಮುಂದಾಗುತ್ತಿಲ್ಲ’ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ರಾಮಕೃಷ್ಣಾರೆಡ್ಡಿ ದೂರಿದರು.

ರಸ್ತೆ ಗುಂಡಿಗಳಿಗೆ ಪೂಜೆ!
ಮೆರವಣಿಗೆ ಉದ್ದಕ್ಕೂ ಅಲ್ಲಲ್ಲಿ ಕಂಡ ರಸ್ತೆ ಗುಂಡಿಗಳಿಗೆ ಈಡುಗಾಯಿ ಹೊಡೆದು, ಅರಿಶಿನ, ಕುಂಕುಮ, ಹೂವು ಹಾಕಿ, ಊದುಗಡ್ಡಿ ಹಚ್ಚಿ ಪೂಜೆ ಮಾಡಿದ ಪ್ರತಿಭಟನಕಾರರು, ‘ಓ ರಸ್ತೆ ಗುಂಡಿಯೇ ಅಪಘಾತದಿಂದ ನಮ್ಮನ್ನು ಪಾರು ಮಾಡು’ ಎಂದು ಬೇಡಿಕೊಂಡರು!

‘ಹರಳೂರು ರಸ್ತೆ ಮಳೆ ಬಂದಾಗಲೆಲ್ಲಾ ಹೊಳೆಯಂತಾಗುತ್ತದೆ. ಮೂರು ಕಿ.ಮೀ ಕ್ರಮಿಸಲು 40 ನಿಮಿಷ ಬೇಕು. ಇಲ್ಲಿನ ಗುಂಡಿಗಳಿಂದ ನನ್ನ ಬೆನ್ನು ಮೂಳೆ ಮುರಿದು ಇತ್ತೀಚಿಗೆ ಆಪರೇಷನ್ ಮಾಡಿಸಿಕೊಂಡಿದ್ದೇನೆ. ವಯಸ್ಸಾದವರು ಈ ರಸ್ತೆಯಲ್ಲಿ ಸಂಚರಿಸಲು ಸಾಧ್ಯವೇ ಇಲ್ಲ’ ಎಂದು ಟೆಕಿ ಸತೀಶ್ ದುಬೆ ಅಸಮಾಧಾನ ವ್ಯಕ್ತಪಡಿಸಿದರು.

ಮೆರವಣಿಗೆ ಉದ್ದಕ್ಕೂ ಅಲ್ಲಲ್ಲಿ ಕಂಡ ರಸ್ತೆ ಗುಂಡಿಗಳಿಗೆ ಈಡುಗಾಯಿ ಹೊಡೆದು, ಅರಿಶಿನ, ಕುಂಕುಮ, ಹೂವು ಹಾಕಿ, ಊದುಗಡ್ಡಿ ಹಚ್ಚಿ ಪೂಜೆ ಮಾಡಿದ ಪ್ರತಿಭಟನಕಾರರು, ‘ಓ ರಸ್ತೆ ಗುಂಡಿಯೇ ಅಪಘಾತದಿಂದ ನಮ್ಮನ್ನು ಪಾರು ಮಾಡು’ ಎಂದು ಬೇಡಿಕೊಂಡರು!

‘ಹರಳೂರು ರಸ್ತೆ ಮಳೆ ಬಂದಾಗಲೆಲ್ಲಾ ಹೊಳೆಯಂತಾಗುತ್ತದೆ. ಮೂರು ಕಿ.ಮೀ ಕ್ರಮಿಸಲು 40 ನಿಮಿಷ ಬೇಕು. ಇಲ್ಲಿನ ಗುಂಡಿಗಳಿಂದ ನನ್ನ ಬೆನ್ನು ಮೂಳೆ ಮುರಿದು ಇತ್ತೀಚಿಗೆ ಆಪರೇಷನ್ ಮಾಡಿಸಿಕೊಂಡಿದ್ದೇನೆ. ವಯಸ್ಸಾದವರು ಈ ರಸ್ತೆಯಲ್ಲಿ ಸಂಚರಿಸಲು ಸಾಧ್ಯವೇ ಇಲ್ಲ’ ಎಂದು ಟೆಕಿ ಸತೀಶ್ ದುಬೆ ಅಸಮಾಧಾನ ವ್ಯಕ್ತಪಡಿಸಿದರು.

ಧಿಕ್ಕಾರದ ಬದಲು ‘ಹಾಯ್ ಹಾಯ್!’
ಮೆರವಣಿಗೆಯ ಉದ್ದಕ್ಕೂ ಘೋಷಣೆಗಳನ್ನು ಕೂಗಿದ ಪ್ರತಿಭಟನಕಾರರು ಎಲ್ಲಿಯೂ, ಯಾರಿಗೂ ಧಿಕ್ಕಾರ ಕೂಗಲಿಲ್ಲ. ಬದಲಾಗಿ ‘ಹಾಯ್ ಹಾಯ್ ಎಂಎಲ್ಎ, ಹಾಯ್ ಹಾಯ್ ಕಾರ್ಪೋರೇಟರ್, ಹಾಯ್ ಹಾಯ್ ಬಿಬಿಎಂಪಿ ನಿದ್ರೆ ಮಾಡಿದ್ದೂ ಸಾಕು ಕೆಲಸ ಮಾಡಿ’ ಎಂದು ಹೇಳಿದರು.

‘ಒಳ್ಳೆಯ ರಸ್ತೆಗಳು ಸುಸ್ಥಿರ ನಗರದ ಲಕ್ಷಣ. ಆದರೆ ಈ ರಸ್ತೆಗಳು ಬಳಸಲು ಯೋಗ್ಯವಾಗಿಲ್ಲ. ಹೀಗಿದ್ದಲ್ಲಿ ನಾವು ಕಟ್ಟುವ ತೆರಿಗೆ ಹಣ ಯಾರ ಮನೆ ಖಜಾನೆ ಸೇರುತ್ತಿದೆ ಲೆಕ್ಕಕೊಡಿ’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.