ADVERTISEMENT

ಬೆಂಗಳೂರು: ಸ್ಪರ್ಶ್‌ ಆಸ್ಪತ್ರೆಯಲ್ಲಿ ಅಸ್ಥಿಮಜ್ಜೆ ಕಸಿ ಘಟಕಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 23:10 IST
Last Updated 22 ಜನವರಿ 2026, 23:10 IST
   

ಬೆಂಗಳೂರು: ನಗರದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳ ಸಮೂಹವಾಗಿರುವ ಸ್ಪರ್ಶ್‌ ಆಸ್ಪತ್ರೆಯು ಹೆಣ್ಣೂರಿನ ಘಟಕದಲ್ಲಿ ಅಸ್ಥಿಮಜ್ಜೆ ಕಸಿ ಕೇಂದ್ರವನ್ನು ಆರಂಭಿಸುವ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.

ಗುರುವಾರ ಅಸ್ಥಿಮಜ್ಜೆ ಕಸಿ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಸ್ಪರ್ಶ್‌ ಆಸ್ಪತ್ರೆ ಸಮೂಹಗಳ ಅಧ್ಯಕ್ಷ ಡಾ.ಶರಣ್‌ ಶಿವರಾಜ್‌ ಪಾಟೀಲ್‌, ‘ಪ್ರತಿಯೊಬ್ಬರಿಗೂ ಮರುಜೀವ ಪಡೆಯಲು ಎರಡನೇ ಅವಕಾಶದ ಅರ್ಹತೆ ಇದೆ. ಸ್ಪರ್ಶ್‌ ಆಸ್ಪತ್ರೆಯ ಅಸ್ಥಿಮಜ್ಜೆ ಕಸಿ ಘಟಕವು ರಕ್ತ ಕ್ಯಾನ್ಸರ್‌ನ ಅತ್ಯಂತ ಗಂಭೀರ ಪರಿಸ್ಥಿತಿಗೆ ಒಳಗಾದ ರೋಗಿಗಳಿಗೆ ಭರವಸೆಯಾಗಿದೆ’ ಎಂದರು.

ಅಸ್ಥಿಮಜ್ಜೆ ಕಸಿ ಘಟಕವನ್ನು ಕ್ಯಾನ್ಸರ್‌ನ ಎಲ್ಲ ಹಂತದ ಚಿಕಿತ್ಸೆಗಳಿಗೆ ಸಜ್ಜುಗೊಳಿಸಲಾಗಿದೆ. ಆರಂಭಿಕ ಹಂತದಲ್ಲೇ ರೋಗವನ್ನು ನಿಖರವಾಗಿ ಪತ್ತೆಹಚ್ಚಿ ಸುಧಾರಿತ ಆರೋಗ್ಯ ಸೇವೆಗಳೊಂದಿಗೆ ಗುಣಪಡಿಸಲಾಗುತ್ತದೆ. ದೀರ್ಘ ಕಾಲದವರೆಗೆ ಬದುಕುವ ಅವಕಾಶವನ್ನು ಕಲ್ಪಿಸಿಕೊಡಲಿದೆ ಎಂದು ಅವರು ಹೇಳಿದರು.

ADVERTISEMENT

ನೂತನ ಘಟಕ ಆರಂಭಿಸುವ ಮೂಲಕ ಸ್ಪರ್ಶ್‌ ಆಸ್ಪತ್ರೆ ಸಮೂಹವು ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳ ಸಾಮರ್ಥ್ಯ ಹೊಂದಿದ್ದು ಕ್ಯಾನ್ಸರ್‌ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಸ್ಪರ್ಶ್‌ ಆಸ್ಪತ್ರೆ ಸಮೂಹದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಸ್‌ದೀಪ್‌ ಸಿಂಗ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.